ಇನ್ನೈದು ವರ್ಷ ಮಂದಿರ ನಿರ್ಮಾಣವಿಲ್ಲ: ವಾಜಪೇಯಿ

ಹೈದರಾಬಾದ್, ಸೆ. 1– ಬಿಜೆಪಿಯು ಈ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಪಡೆದರೂ ರಾಮಮಂದಿರ ನಿರ್ಮಾಣ, ಏಕರೂಪ ನಾಗರಿಕ ಸಂಹಿತೆ ಮತ್ತು 370ನೇ ವಿಧಿ ವಿಷಯಗಳನ್ನು ಮುಂದಿನ 5 ವರ್ಷಗಳ ಕಾಲ ಎತ್ತುವುದಿಲ್ಲ ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇಂದು ಇಲ್ಲಿ
ಸ್ಪಷ್ಟಪಡಿಸಿದರು.

ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಪಕ್ಷವು ಸಮ್ಮಿಶ್ರ ಸರ್ಕಾರ ಮತ್ತು ರಾಷ್ಟ್ರೀಯ ಅಜೆಂಡಾಕ್ಕೆ ಬದ್ಧವಾಗಿದೆ ಎಂದು ಹೇಳಿದರು.

‘ಬಿಜೆಪಿಯು ಏಕೆ ಈ ವಿಷಯಗಳನ್ನು ಶಾಶ್ವತವಾಗಿ ಕೈಬಿಡಲು ತಯಾರಿಲ್ಲ?’ ಎಂಬ ಪ್ರಶ್ನೆಗೆ ‘ಈ ಪ್ರಣಾಳಿಕೆ ಐದು ವರ್ಷ ಅವಧಿಯದ್ದು. ಐದು ವರ್ಷಗಳ ನಂತರ ಏನಾಗುತ್ತದೆ ಎಂಬುದನ್ನು ನನಗೆ ಹೇಳಲು ಸಾಧ್ಯವಿಲ್ಲ’ ಎಂದರು.

ಭಾರತಕ್ಕೆ ನುಸುಳುವ ಉಗ್ರರ ಯತ್ನ ವಿಫಲ

ಜಮ್ಮು, ಸೆ. 1– ಜಮ್ಮು ವಿಭಾಗದ ಪೂಂಚ್ ಮತ್ತು ಚಾಂಬ್‌ಗಳಲ್ಲಿನ ವಾಸ್ತವ ನಿಯಂತ್ರಣ ರೇಖೆ ಪ್ರದೇಶಗಳಲ್ಲಿ ನಿನ್ನೆ ರಾತ್ರಿ ಭಾರತದೊಳಕ್ಕೆ ನುಸುಳುವ ಪಾಕಿಸ್ತಾನಿ ಬೆಂಬಲಿತ ಉಗ್ರಗಾಮಿಗಳ ಎರಡು ಯತ್ನಗಳನ್ನು ಭಾರತೀಯ ಪಡೆಗಳು ವಿಫಲಗೊಳಿಸಿವೆ.

ಇದೂ ಸೇರಿದಂತೆ ನಿನ್ನೆ ಸಂಜೆಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ 30 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ 22 ಮಂದಿ ಅತಿಕ್ರಮಣಕಾರರು ಮತ್ತು ಆರು ಸೈನಿಕರು ಸೇರಿದ್ದಾರೆ. ದೋಡಾ ಮತ್ತು ರಾಜೌರಿ ಪ್ರದೇಶದಲ್ಲಿ ಗುಂಡುಗಳಿಂದ ತುಂಬಿದ್ದ ಎರಡು ಮೃತದೇಹಗಳು ಪತ್ತೆಯಾಗಿವೆ ಎಂದು ಭಾರತದ ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.