ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ: ದಂತವೈದ್ಯ ಕಾಲೇಜು ಪ್ರಕರಣ– ಬಂಗಾರಪ್ಪ ಆರೋಪ ಮುಕ್ತ

Published : 6 ಸೆಪ್ಟೆಂಬರ್ 2024, 19:29 IST
Last Updated : 6 ಸೆಪ್ಟೆಂಬರ್ 2024, 19:29 IST
ಫಾಲೋ ಮಾಡಿ
Comments

ದಂತವೈದ್ಯ ಕಾಲೇಜು ಪ್ರಕರಣ: ಬಂಗಾರಪ್ಪ ಆರೋಪ ಮುಕ್ತ

ಬೆಂಗಳೂರು, ಸೆ. 6– ನಗರದ ಪಿ.ಸಿ.ದಂತವೈದ್ಯ ಕಾಲೇಜಿಗೆ ಮನ್ನಣೆ ಕೊಡಿಸಲು ಅಂದಿನ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರು ₹ 5 ಲಕ್ಷ ತೆಗೆದುಕೊಂಡರೆಂಬ ಆರೋಪದಿಂದ ಅವರನ್ನು ಹೈಕೋರ್ಟ್‌ ಇಂದು ಮುಕ್ತಗೊಳಿಸಿತು.

ಕಾಲೇಜಿಗೆ ಮನ್ನಣೆ ಪಡೆಯಲು ಬಂಗಾರಪ್ಪ ಅವರೂ ಸೇರಿದಂತೆ ಹಲವರಿಗೆ ಲಂಚ ನೀಡಿದುದಾಗಿ ಕಾಲೇಜಿನ ಪ್ರಾಂಶುಪಾಲ ಆರ್‌.ಡಿ.ಪೆಣ್ಣತ್ತೂರು ತಿಳಿಸಿದ್ದರ ಮೇರೆಗೆ ತನಿಖೆ ನಡೆಸಿದ ಸಿಬಿಐನವರು ವಿಶೇಷ ಕೋರ್ಟಿನಲ್ಲಿ ಮೊಕದ್ದಮೆ ಹೂಡಿದ್ದರು.

ವೈಜಯಂತಿಮಾಲಾ ಬಾಲಿ ಬಿಜೆಪಿಗೆ

ಚೆನ್ನೈ, ಸೆ. 6 (ಯುಎನ್‌ಐ)– ಖ್ಯಾತ ನಟಿ ಹಾಗೂ ರಾಜ್ಯಸಭಾ ಸದಸ್ಯೆ ವೈಜಯಂತಿಮಾಲಾ ಬಾಲಿ ಇಂದು ಇಲ್ಲಿ ಬಿಜೆಪಿ ಸೇರಿದರು.

1984 ಮತ್ತು 1989ರಲ್ಲಿ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮದ್ರಾಸ್‌ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT