ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ | ಅಸ್ಸಾಂ ಸೇತುವೆ ಸ್ಫೋಟ: ಪ್ರಯಾಣಿಕರು ಪಾರು

Published : 9 ಆಗಸ್ಟ್ 2024, 23:30 IST
Last Updated : 9 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಅಸ್ಸಾಂ ಸೇತುವೆ ಸ್ಫೋಟ: ರಾಜಧಾನಿ ಎಕ್ಸ್‌ಪ್ರೆಸ್‌ ಪ್ರಯಾಣಿಕರು ಪಾರು

ಗುವಾಹಟಿ, ಆ. 9 (ಯುಎನ್‌ಐ)– ಉಲ್ಫಾದವರು ಎಂದು ನಂಬಲಾದ ತೀವ್ರಗಾಮಿಗಳು ಅಸ್ಸಾಂನ ಕೊಕ್ರಜಾರ್‌ ಹಾಗೂ ಸಲಕಾಟಿ ನಡುವೆ ರೈಲ್ವೆ ಸೇತುವೆಯೊಂದನ್ನು ಸ್ಫೋಟಿಸಿದ್ದಾರೆ.

ಇದರಿಂದ ಉತ್ತರ ಹಾಗೂ ಈಶಾನ್ಯ ರಾಜ್ಯಗಳು ಭಾರತದ ಇತರ ಪ್ರದೇಶಗಳ ಜತೆಗಿನ ರೈಲು ಸಂಪರ್ಕವನ್ನು ಕಡಿದುಕೊಂಡಿವೆ.

ಸ್ವಾತಂತ್ರ್ಯ ದಿನಾಚರಣೆಗೆ ಮೊದಲು ಅಸ್ಸಾಂನಲ್ಲಿ ಭಾರಿ ಕ್ಷೋಭೆಯನ್ನು ನಿರ್ಮಿಸುವ ಪ್ರಯತ್ನವಿದು ಎನ್ನಲಾಗಿದೆ.

ಸೇತುವೆ ಸ್ಫೋಟದ ಕಾರಣ ಸರಕಿನ ರೈಲಿನ ಎಂಜಿನ್ನು ಹಾಗೂ 7 ವ್ಯಾಗನ್ನುಗಳು ಹಳಿ ತಪ್ಪಿದವು.

ಶಿವಮೊಗ್ಗ: ಗೌಡರ ಬಣದಿಂದ ದಳ ಕಚೇರಿ ‘ವಶ’

ಶಿವಮೊಗ್ಗ, ಆ. 9– ಜಿಲ್ಲಾ ಜನತಾ ದಳದ ಕಚೇರಿ ‘ಗಾಂಧಿ ಮಂದಿರ’ವನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಬಣವು ಇಂದು ಬೆಳಿಗ್ಗೆ ತನ್ನ ‘ವಶ’ಕ್ಕೆ ತೆಗೆದುಕೊಂಡು ಜನತಾ ದಳ (ಜಾತ್ಯತೀತ) ಪಕ್ಷದ ಅಧ್ಯಕ್ಷರನ್ನಾಗಿ ಶಿವಮೊಗ್ಗ ತಾಲ್ಲೂಕು ಚಿಕ್ಕಮರಡಿಯ ಎಂ.ಬಿ. ಶಿವಣ್ಣ ಅವರನ್ನು ಆಯ್ಕೆ ಮಾಡಿತು.

ಆಗಸ್ಟ್‌ ಒಂದರಂದು ದೇವೇಗೌಡರ ಬಣಕ್ಕೆ ಬೆಂಬಲ ವ್ಯಕ್ತಪಡಿಸಿ ಬಹುಮತದ ನಿರ್ಣಯ ಕೈಗೊಂಡ ಜಿಲ್ಲಾ ಜನತಾ ದಳದ ಸಭೆಯಲ್ಲಿ ಈ ಗುಂಪಿನ ಅಧ್ಯಕ್ಷರಾಗಿ ಆಯ್ಕೆಯಾದ ಜಿಲ್ಲಾ ಜನತಾ ದಳದ ಅಧ್ಯಕ್ಷ ವಿ.ರಾಜು ಅವರು ಬೆಂಗಳೂರಿನಲ್ಲಿ ಶನಿವಾರ ನಡೆದ ಏಕತಾ ಸಮಾವೇಶದಲ್ಲಿ ಭಾಗವಹಿಸಿ ತಮ್ಮ ನಿಷ್ಠೆಯನ್ನು ಜೆ.ಎಚ್‌. ಪಟೇಲರಿಗೆ ಬದಲಾಯಿಸಿದ್ದರಿಂದ ಜಿಲ್ಲೆಯಲ್ಲಿ ಈ ಬೆಳವಣಿಗೆ ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT