ಶುಕ್ರವಾರ, ಸೆಪ್ಟೆಂಬರ್ 24, 2021
21 °C

25 ವರ್ಷಗಳ ಹಿಂದೆ: ಸೋಮವಾರ, ಆಗಸ್ಟ್‌ 19, 1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಜರಾತ್: ಬಿಜೆಪಿ ಸರ್ಕಾರ ಬಿಕ್ಕಟ್ಟಿನಲ್ಲಿ

ಗಾಂಧಿನಗರ, ಆ. 18 (ಪಿಟಿಐ)– ಪ್ರಮುಖ ಭಿನ್ನಮತೀಯ ನಾಯಕ ಶಂಕರ್ ಸಿಂಗ್ ವಘೇಲಾ ಅವರಿಗೆ ಬೆಂಬಲ ವ್ಯಕ್ತಪಡಿಸಿರುವ ಪಂಚಾಯತ್ ರಾಜ್‌ ಸಚಿವ ಆತ್ಮರಾಂ ಪಾಟೇಲ್, ಶಿಕ್ಷಣ ಖಾತೆ ಉಪ ಸಚಿವ ಮನಸಿಂಗ್ ಚೌಹಾನ್ ಹಾಗೂ ಈಗಾಗಲೇ ಸಂಪುಟದಿಂದ ಇಂದು ರಾತ್ರಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ.

ಇದರೊಂದಿಗೆ ಗುಜರಾತ್‌ನಲ್ಲಿ 10 ತಿಂಗಳಿಂನಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ.

ಸಿಟಿಬಿಟಿ: ಮತ್ತೆ ತಿದ್ದುಪಡಿ ಮಾಡಲು ಭಾರತದ ಪಟ್ಟು

ಕೌಲಾಲುಪುರ, ಆ. 18(ಪಿಟಿಐ)– ಉದ್ದೇಶಿತ ಸಮಗ್ರ ಅಣ್ವಸ್ತ್ರ ಪರೀಕ್ಷಾ ನಿಷೇಧ ಒಪ್ಪಂದ (ಸಿಟಿಬಿಟಿ)ವನ್ನು ಎರಡನೇ ಬಾರಿ ತಿದ್ದುಪಡಿ ಮಾಡಲು ಇರುವ ಅಡ್ಡಿ ಏನು ಎನ್ನುವುದು ತನಗೆ ಅರ್ಥವಾಗುತ್ತಿಲ್ಲ ಎಂದು ಭಾರತ ಹೇಳಿದೆ.

ಚೀನಾ ಬಯಸಿದಂತೆ ಈಗಾಗಲೇ ಒಮ್ಮೆ ತಿದ್ದುಪಡಿಯಾಗಿದ್ದು ಈಗ ಎರಡನೇ ಬಾರಿ ಏಕೆ ತಿದ್ದುಪಡಿ ಮಾಡಬಾರದು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಐ.ಕೆ. ಗುಜ್ರಾಲ್ ಅವರು ಪ್ರಶ್ನಿಸಿದ್ದಾರೆ.

ಈ ಕರಡು ಒಪ್ಪಂದ ಭಾರತದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂಬ ಭಾರತದ ನಿಲುವನ್ನು ಅವರು ಪುಸರುಚ್ಚರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು