ತ್ರಿಪುರಾ: ಜನಾಂಗೀಯ ಗಲಭೆಗೆ ಕನಿಷ್ಠ 18 ಮಂದಿ ಬಲಿ

ಅಗರ್ತಲ, ನ. 19 (ಯುಎನ್ಐ)– ಉತ್ತರ ತ್ರಿಪುರಾದ ಕಾಂಚನಪುರದಲ್ಲಿ ಇಂದು ರಾಷ್ಟ್ರೀಯ ತ್ರಿಪುರಾ ವಿಮೋಚನಾ ರಂಗದ (ಎನ್ಎಲ್ಎಫ್ಟಿ) ಉಗ್ರಗಾಮಿಗಳ ಗುಂಡಿನ ದಾಳಿ ಹಾಗೂ ಅನಂತರ ನಡೆದ ಹಿಂಸಾಚಾರಗಳಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಕನಿಷ್ಠ 18 ಮಂದಿ ಸತ್ತಿದ್ದಾರೆ.

ಇಂದು ಮುಂಜಾನೆ ಕಾಂಚನಪುರ ಬಳಿಯ ಬರಾಹಲ್ದಿ ಗ್ರಾಮಕ್ಕೆ ನುಗ್ಗಿದ ಶಸ್ತ್ರಸಜ್ಜಿತ ಉಗ್ರಗಾಮಿಗಳು ಮನಬಂದಂತೆ ಗುಂಡು ಹಾರಿಸಲು ಆರಂಭಿಸಿದರು. ಆಗ ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಸ್ಥಳದಲ್ಲೇ ಸತ್ತರು. ಈ ಘಟನೆಯಲ್ಲಿ ಇತರ ಐವರು ತೀವ್ರವಾಗಿ ಗಾಯಗೊಂಡರು.

ಸೀಮೆಎಣ್ಣೆ, ಅಡುಗೆ ಅನಿಲ ಬೆಲೆ ಸ್ವಲ್ಪ ಪ್ರಮಾಣ ಇಳಿಕೆ

ನವದೆಹಲಿ, ನ. 19 (ಯುಎನ್ಐ)– ತೃಣಮೂಲ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ತೀವ್ರ ಒತ್ತಡದ ಫಲವಾಗಿ ಕೇಂದ್ರ ಸರ್ಕಾರವು ಇಂದು ಅಡುಗೆ ಅನಿಲ ಮತ್ತು ಸೀಮೆಎಣ್ಣೆಯ ಹೆಚ್ಚಿಸಿದ ಬೆಲೆಯನ್ನು ಆಂಶಿಕವಾಗಿ ಕಡಿಮೆ ಮಾಡಿದೆ.

ಸೀಮೆಎಣ್ಣೆ ಬೆಲೆ ಪ್ರತಿ ಲೀಟರ್ಗೆ ಒಂದು ರೂಪಾಯಿ ಹಾಗೂ ಅಡುಗೆ ಅನಿಲ ದರವನ್ನು ಸಿಲಿಂಡರ್ ಒಂದಕ್ಕೆ ಹತ್ತು ರೂಪಾಯಿಯಂತೆ ಇಳಿಸಲಾಗಿದೆ. ಇಳಿಸಿರುವ ಬೆಲೆಗಳು ಎಂದಿನಿಂದ ಜಾರಿಗೆ ಬರಲಿವೆ ಎಂಬುದನ್ನು ಅನಂತರ ಪ್ರಕಟಿಸುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.