ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷದ ಹಿಂದೆ: ರಾಜ್ಯ ಆಡಳಿತ ನ್ಯಾಯ ಮಂಡಳಿ ರದ್ದು

Last Updated 28 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ರಾಜ್ಯ ಆಡಳಿತ ನ್ಯಾಯ ಮಂಡಳಿ ರದ್ದು

ಬೆಂಗಳೂರು, ಮಾರ್ಚ್‌ 28– ಕರ್ನಾಟಕ ಆಡಳಿತ ನ್ಯಾಯಮಂಡಳಿಯನ್ನು ರದ್ದು ಮಾಡಲು ಇಂದು ನಡೆದ ಸಚಿವ ಸಂಪುಟ ಸಭೆಯು ನಿರ್ಧರಿಸಿತು. ಸುಪ್ರೀಂಕೋರ್ಟ್‌ನ ಈಚಿನ ತೀರ್ಪಿನ ಹಿನ್ನೆಲೆಯಲ್ಲಿ ತೆಗೆದು ಕೊಂಡಿರುವ ಈ ನಿರ್ಧಾರ ಈ ವರ್ಷದ ಆಗಸ್ಟ್‌ ಒಂದರಿಂದ ಜಾರಿಗೆ ಬರಲಿದೆ.

ಸಂಪುಟ ಸಭೆಯ ನಂತರ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ ವಾರ್ತಾ ಸಚಿವ ಎಂ.ಸಿ.ನಾಣಯ್ಯ, ಇನ್ನು ಮುಂದೆ ಸರ್ಕಾರಿ ಸೇವಾ ವಿಷಯದ ವಾಜ್ಯಗಳ ಸಂಬಂಧದಲ್ಲಿ ನೇರವಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಹೇಳಿದರು.

ಆಡಳಿತ ನ್ಯಾಯಮಂಡಳಿಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ಹೈಕೋರ್ಟ್‌ಗೆ ವರ್ಗಾಯಿಸಲಾಗುವುದು. ನ್ಯಾಯಮಂಡಳಿ ರದ್ದು ತೀರ್ಮಾನವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಲಾಗುವುದು ಎಂದು ಅವರು ವಿವರಿಸಿದರು.

ಟಿಡಿಪಿ ಬೆಂಬಲ: ವಾಜಪೇಯಿ ಸರ್ಕಾರಕ್ಕೆ ವಿಶ್ವಾಸಮತ

ನವದೆಹಲಿ, ಮಾರ್ಚ್‌ 28– ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಸಮ್ಮಿಶ್ರ ಸರ್ಕಾರ ಇಂದು ರಾತ್ರಿ 274 ಮತಗಳನ್ನು ಗಳಿಸುವ ಮೂಲಕ ವಿಶ್ವಾಸ ಮತವನ್ನು ಪಡೆಯಿತು.

ಲೋಕಸಭೆಯ ಒಟ್ಟು 535 ಸದಸ್ಯರು ಮತದಲ್ಲಿ ಭಾಗವಹಿಸಿದ್ದರು. ವಿಶ್ವಾಸ ಮತವನ್ನು ವಿರೋಧಿಸಿ 261 ಮತಗಳು ಬಿದ್ದಿವು.

ಕೊನೇಗಳಿಗೆಯಲ್ಲಿ ರೆಲುಗುದೇಶಂ ಪಕ್ಷ ಸರ್ಕಾರದ ಪರವಾಗಿ ತಳೆದ ನಿಲುವು ಮತ್ತು ಮತದಾನದಲ್ಲಿ ತಟಸ್ಥವಾಗಿ ಉಳಿಯಲು ನ್ಯಾಷನಲ್ ಕಾನ್ಫೆರೆನ್ಸ್‌ ಪಕ್ಷ ಕೈಗೊಂಡ ನಿರ್ಧಾರದಿಂದ ಸರ್ಕಾರ ವಿಶ್ವಾಸಮತ ಪಡೆಯಲು ಸಾಧ್ಯವಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT