ಶುಕ್ರವಾರ, ಡಿಸೆಂಬರ್ 4, 2020
24 °C

ಪ್ರಜಾವಾಣಿ 25 ವರ್ಷಗಳ ಹಿಂದೆ| ಭಾನುವಾರ, 5–11–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಾವಳಿಯಲ್ಲಿ ವಿದ್ಯುತ್‌ ಯೋಜನೆಗೆ ಪರಿಸರ ಖಾತೆ ಅನುಮತಿ ಇಲ್ಲ

ಬೆಂಗಳೂರು, ನ. 4– ದಕ್ಷಿಣ ಕನ್ನಡದ ಕರಾವಳಿ ಪ್ರದೇಶದಲ್ಲಿ ಕೊಜೆಂಟ್ರಿಕ್ಸ್‌ ವಿದ್ಯುತ್‌ ಸ್ಥಾವರವೂ ಸೇರಿದಂತೆ ಯಾವುದೇ ಬೃಹತ್‌ ಉದ್ಯಮಕ್ಕೂ ರಾಜ್ಯದ ಪರಿಸರ ಇಲಾಖೆ ತನ್ನ ಅನುಮತಿಯನ್ನು ಕೊಟ್ಟಿಲ್ಲ ಎಂದು ಇಲಾಖೆಯ ಕಾರ್ಯದರ್ಶಿ ಎ.ಎನ್‌.ಯಲ್ಲಪ್ಪ ರೆಡ್ಡಿ ಇಂದು ಇಲ್ಲಿ ಹೇಳಿದರು.

ಜೀವಜಾಲ ಸಮತೋಲನ ಮತ್ತು ಪರಿಸರ ದೃಷ್ಟಿಯಿಂದ ಬಹುಸೂಕ್ಷ್ಮ ಪ್ರದೇಶವಾಗಿರುವ ಇದು ಬೃಹತ್‌ ಕೈಗಾರಿಕೆಗಳ ಸ್ಥಾಪನೆಗೆ ಸೂಕ್ತವಲ್ಲದ ಜಾಗ ಎನ್ನುವುದು ಇಲಾಖೆಯ ಅಭಿಮತ ಎಂದು ಅವರು ವಿವರಿಸಿದರು.

ರಕ್ಷಿತ ಪ್ರಾಣಿಗಳು ಭಕ್ಷಣೆಗೆ

ಬೀಜಿಂಗ್‌, ನ. 4 (ಡಿಪಿಎ)– ವಿನಾಶದ ಅಂಚಿನಲ್ಲಿರುವ ಪ್ರಾಣಿಗಳ ಮಾಂಸ ಬಳಸುತ್ತಿದ್ದ ಕಾರಣಕ್ಕೆ ಚೀನಾ ದೇಶದ ಅಧಿಕಾರಿಗಳು 19 ಹೋಟೆಲು ಹಾಗೂ ರೆಸ್ಟೊರೆಂಟ್‌ಗಳ ಲೈಸೆನ್ಸ್‌ ಅನ್ನು ರದ್ದು ಮಾಡಿದ ಘಟನೆ ಹೈನಾನ್‌ನ ದಕ್ಷಿಣ ದ್ವೀಪದಲ್ಲಿ ನಡೆದಿದೆ.

ಮೂರು ತಿಂಗಳ ಕಾಲ ಬಂದರು, ರೈಲು ನಿಲ್ದಾಣ, ರೈತರ ಮಾರುಕಟ್ಟೆ, ಅಂಗಡಿಗಳ ಮೇಲೆ ದಾಳಿ ನಡೆಸಿ 6,309 ವನ್ಯಪ್ರಾಣಿಗಳ ಮಾಂಸ ವಶಪಡಿಸಿಕೊಳ್ಳಲಾಯಿತು. ಇದರಲ್ಲಿ, ಸಂರಕ್ಷಿಸಬೇಕಾದ ಪ್ರಾಣಿಗಳ ಪಟ್ಟಿಯಲ್ಲಿ ಮೊದಲ ಆದ್ಯತೆಯಾಗಿರುವ 106 ಮತ್ತು ಎರಡನೇ ಆದ್ಯತೆಯಾಗಿರುವ 3,114 ಪ್ರಾಣಿಗಳ ಮಾಂಸ ಸೇರಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು