ಬುಧವಾರ, ನವೆಂಬರ್ 25, 2020
20 °C

ಪ್ರಜಾವಾಣಿ 25 ವರ್ಷಗಳ ಹಿಂದೆ| ಮಂಗಳವಾರ, 7–11–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿಸ್ತೂಲು ತೋರಿಸಿ ನಗರ ಬ್ಯಾಂಕ್‌ ದರೋಡೆ

ಬೆಂಗಳೂರು, ನ. 6– ಮಹಿಳೆಯೂ ಸೇರಿದಂತೆ ಇಬ್ಬರು ಎರಡು ಆಟಿಕೆ ಪಿಸ್ತೂಲ್‌ಗಳನ್ನು ಹಿಡಿದು ಹಾಡಹಗಲೇ ಬ್ಯಾಂಕೊಂದಕ್ಕೆ ನುಗ್ಗಿ ಸಿಬ್ಬಂದಿಯನ್ನು ಬೆದರಿಸಿ ಭದ್ರತಾ ಕೋಣೆಯಿಂದ 6.80 ಲಕ್ಷ ರೂಪಾಯಿ ಹಣವಿದ್ದ ಬ್ರೀಫ್‌ಕೇಸ್‌ ದರೋಡೆ ಮಾಡಿ ಪರಾರಿಯಾದ ಪ್ರಕರಣ ನಗರದಲ್ಲಿ ಇಂದು ನಡೆದಿದೆ.

ಸಂಜಯನಗರದ ‘ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌’ಗೆ ಮಧ್ಯಾಹ್ನ 12.30ರಲ್ಲಿ ಆರಡಿ ಎತ್ತರದ ಯುವಕ ಹಾಗೂ ಆಕರ್ಷಕ ಮೈಕಟ್ಟಿನ ಲಕ್ಷಣವಾದ ಯುವತಿ ನುಗ್ಗಿದರು ಎನ್ನಲಾಗಿದೆ.

ವಿದ್ಯಾರ್ಥಿಗಳಿಗೆ ಬಂದೂಕು ಮಾರುವ ಜಾಲ ಪತ್ತೆ

ಬೆಂಗಳೂರು, ನ. 6– ವಿದ್ಯಾರ್ಥಿ ಸಮುದಾಯಕ್ಕೆ ಬಂದೂಕು ಮತ್ತು ಮದ್ದು–ಗುಂಡುಗಳನ್ನು ಮಾರಾಟ ಮಾಡಲು ಯತ್ನಿಸಿದ ಉತ್ತರದ ರಾಜ್ಯಗಳ ವಿದ್ಯಾರ್ಥಿಗಳ ಜಾಲವೊಂದನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

ಮತ್ತಿಕೆರೆಯಲ್ಲಿ ಪಿಸ್ತೂಲ್‌ ಮಾರಲು ಯತ್ನಿಸಿದ ಎಂ.ಎಸ್‌. ರಾಮಯ್ಯ ಎಂಜಿನಿಯರಿಂಗ್‌ ಕಾಲೇಜಿನ ಮಾಜಿ ವಿದ್ಯಾರ್ಥಿ ರತ್ನಕುಮಾರ್‌ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು