ಅಧಿಕಾರಿಗಳಿಬ್ಬರಿಗೆ ಕೃಷಿ ಸಚಿವರಿಂದ ಕಪಾಳಮೋಕ್ಷ

ಕೋಲಾರ, ಆ. 3– ಜಿಲ್ಲಾ ಪಂಚಾಯಿತಿ ಕಚೇರಿಯ ಇಬ್ಬರು ಅಧಿಕಾರಿಗಳಿಗೆ ಇಂದು ಸಂಜೆ ನಾಲ್ಕು ಗಂಟೆ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ. ಬೈರೇಗೌಡರು ಕಪಾಳಮೋಕ್ಷ ಮತ್ತು ತಮ್ಮ ಕೈಲಿದ್ದ ನಡಿಗೆ ಕೋಲಿನಿಂದ ಬೆನ್ನ ಮೇಲೆ ಬಲವಾಗಿ ತಿವಿದ ಬಗ್ಗೆ ಈ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ದೂರಿದ್ದಾರೆ.

ಜಿಲ್ಲಾ ಪಂಚಾಯಿತಿ ಕಚೇರಿಗೆ ಭೇಟಿ ನೀಡಿದ್ದ ಸಚಿವರುಹಾಜರಿ ಪುಸ್ತಕ ತರಲು ಸೂಪರಿಂಟೆಂಡೆಂಟ್ ಅವರಿಗೆ ತಿಳಿಸಿದಾಗ ಅವರು ಹಾಜರಿ ಪುಸ್ತಕ ತರಲು ತಡವಾದುದನ್ನು ಸಹಿಸದ ಸಚಿವರು ಕೂಡಲೇ ಹಾಲ್ಗೆ ನುಗ್ಗಿ ಇವರಿಗೆ ಬೆನ್ನು ಹಾಕಿ ನಿಂತಿದ್ದ ಸೂಪರಿಂಟೆಂಡೆಂಟ್ ಎಚ್. ವೆಂಕಣ್ಣ ಅವರ ಬೆನ್ನಿಗೆ ಅವರ ಕೈಲಿದ್ದ ಊರುಗೋಲಿನಿಂದ ಬಲವಾಗಿ ತಿವಿದುದಾಗಿಯೂ, ಮತ್ತೊಬ್ಬ ಸೂಪರಿಂಟೆಂಡೆಂಟ್ ಮಂಜುನಾಥ್ ಅವರ ಎಡ ಕಪಾಳಕ್ಕೆ ಬೀಸಿ ಹೊಡೆದುದಾಗಿಯೂ ಇವರಿಬ್ಬರೂ ತಿಳಿಸಿದರು. ಸಚಿವರ ವಿರುದ್ಧ ಅಧಿಕಾರಿಗಳು ಗಲ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.