ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಭಾರತೀಯ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್‌ಗೆ ನೊಬೆಲ್‌ ಪ್ರಶಸ್ತಿ

Published 14 ಅಕ್ಟೋಬರ್ 2023, 19:09 IST
Last Updated 14 ಅಕ್ಟೋಬರ್ 2023, 19:09 IST
ಅಕ್ಷರ ಗಾತ್ರ

ಭಾರತೀಯ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ಗೆ ನೊಬೆಲ್‌ ಪ್ರಶಸ್ತಿ

ಸ್ಟಾಕ್‌ಹೋಂ (ಸ್ವೀಡನ್‌) (ಎಪಿ) ಅ. 14– ಬ್ರಿಟನ್ನಿನ ಕೆಂಬ್ರಿಜ್‌ನಲ್ಲಿರುವ ಟ್ರಿನಿಟಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಅಮಾರ್ತ್ಯ ಸೇನ್‌ ಅವರಿಗೆ ಅರ್ಥಶಾಸ್ತ್ರಕ್ಕಾಗಿ ನೀಡುವ ಪ್ರತಿಷ್ಠಿತ ‘ನೊಬೆಲ್‌ ಪುರಸ್ಕಾರ’ ದೊರೆತಿದೆ.

‘ಬರಗಾಲ ಮತ್ತು ಬಡತನದ ಹಿಂದಿರುವ ಆರ್ಥಿಕ ಪ್ರಕ್ರಿಯೆಗಳನ್ನು ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ‘ಕ್ಷೇಮಾಭಿವೃದ್ಧಿ ಶಾಸ್ತ್ರ’ಕ್ಕೆ ಪ್ರೊ. ಸೇನ್‌ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ’ ಎಂದು ‘ರಾಯಲ್‌ ಸ್ವೀಡಿಷ್‌ ಅಕಾಡೆಮಿ ಆಫ್‌ ಸೈನ್ಸಸ್‌’ ಹೇಳಿದೆ.

ನೊಬೆಲ್‌ ಪ್ರಶಸ್ತಿ ಪುರಸ್ಕೃತ ಭಾರತೀಯರಲ್ಲಿ ಅಮಾರ್ತ್ಯ ಸೇನ್‌ ಆರನೇಯವರು. ಈ ಪ್ರಶಸ್ತಿ ಪಡೆದ ಭಾರತದ ಪ್ರಥಮ ಅರ್ಥಶಾಸ್ತ್ರಜ್ಞರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT