ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಶುಕ್ರವಾರ, 27–2–1998

Last Updated 27 ಫೆಬ್ರುವರಿ 2023, 0:30 IST
ಅಕ್ಷರ ಗಾತ್ರ

ಬಲಾಬಲ ಪರೀಕ್ಷೆ: ಕಲ್ಯಾಣ್‌ ಸಿಂಗ್‌ಗೆ ಜಯ

ಲಖನೌ, ಫೆ. 26 (ಪಿಟಿಐ, ಯುಎನ್‌ಐ)– ಉತ್ತರಪ್ರದೇಶದ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನದ ಬಲಾಬಲ ಪರೀಕ್ಷೆಯಲ್ಲಿ ಬಿಜೆಪಿಯ ಕಲ್ಯಾಣ್‌ ಸಿಂಗ್‌ ಅವರು ಲೋಕತಾಂತ್ರಿಕ ಕಾಂಗ್ರೆಸ್‌ನ ಜಗದಾಂಬಿಕ ಪಾಲ್‌ ಅವರನ್ನು 29 ಮತಗಳ ಅಂತರದಿಂದ ಪರಾಭವಗೊಳಿಸಿದರು.

ವಿಧಾನಸಭೆಯ ಒಟ್ಟು 424 ಸದಸ್ಯರಲ್ಲಿ ಮತದಾನದಲ್ಲಿ 422 ಮಂದಿ ಭಾಗವಹಿಸಿದ್ದರು. ಅವರಲ್ಲಿ ಕಲ್ಯಾಣ್‌ ಸಿಂಗ್‌ ಅವರಿಗೆ 225 ಮತಗಳು ಬಂದವು.

ಬೆಳಿಗ್ಗೆ 11.55ಕ್ಕೆ ಪ್ರಾರಂಭವಾದ ಮತದಾನ ಸಂಜೆ 6.50ಕ್ಕೆ ಅಂತ್ಯಗೊಂಡಿತು. ಸ್ಪೀಕರ್‌ ಕೇಸರಿನಾಥ್‌ ತ್ರಿಪಾಠಿ ಮತ್ತು ಇನ್ನೊಬ್ಬ ಸದಸ್ಯರು ಮತ ಚಲಾಯಿಸಲಿಲ್ಲ. ಇದಾದ ತಕ್ಷಣ ಎಣಿಕೆ ಪ್ರಾರಂಭವಾಯಿತು.

ಮತದಾನ ಇನ್ನೇನು ಅಂತ್ಯವಾಯಿತು ಎನ್ನುವಾಗ ರಾಷ್ಟ್ರೀಯ ಭದ್ರತಾ ಕಾಯ್ದೆಯ ಅನ್ವಯ ಬಂಧಿತರಾಗಿರುವ ಐವರು ಶಾಸಕರನ್ನು ಸದನಕ್ಕೆ ಕರೆತರಲಾಯಿತು. ಅವರೂ ಮತ ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT