ಬುಧವಾರ, ಜನವರಿ 20, 2021
17 °C

ಪ್ರಜಾವಾಣಿ 25 ವರ್ಷಗಳ ಹಿಂದೆ: ಶನಿವಾರ, 6–1–1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

25 ವರ್ಷಗಳ ಹಿಂದೆ

ಕಾವೇರಿ: ತುಮಕೂರು, ಶಿವಮೊಗ್ಗಕ್ಕೂ ಹಬ್ಬಿದ ಚಳವಳಿ

ಬೆಂಗಳೂರು, ಜ. 5- ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವುದನ್ನು ಪ್ರತಿಭಟಿಸಿ ಮೈಸೂರು, ಮಂಡ್ಯ ಜಿಲ್ಲೆಯ ಕೆಲವೆಡೆ ಯಶಸ್ವಿ ಬಂದ್‌ ಆಚರಿಸಲಾಗಿದೆ. ಬಹುತೇಕ ಮೈಸೂರು, ಮಂಡ್ಯ ಜಿಲ್ಲೆಗೆ ಮೀಸಲಾಗಿದ್ದ ಕಾವೇರಿ ಚಳವಳಿ ಇಂದು ಶಿವಮೊಗ್ಗ, ಭದ್ರಾವತಿ ಹಾಗೂ ತುಮಕೂರಿಗೂ ವ್ಯಾಪಿಸಿದೆ.

ಮೈಸೂರು ನಗರದಲ್ಲಿ ಅಂಗಡಿ–ಮುಂಗಟ್ಟು, ಚಿತ್ರಮಂದಿರಗಳು ಸಂಪೂರ್ಣ ಮುಚ್ಚಿದ್ದವು. ನಗರ ಹಾಗೂ ಗ್ರಾಮಾಂತರ ಬಸ್ಸುಗಳ ಸಂಚಾರ ಸ್ಥಗಿತಗೊಂಡಿತ್ತು. ಮಂಡ್ಯ ಜಿಲ್ಲೆಯ ಕೆ.ಎಂ. ದೊಡ್ಡಿ, ಮಳವಳ್ಳಿ, ಶ್ರೀರಂಗಪಟ್ಟಣ ಮತ್ತು ಕೆರಗೋಡಿನಲ್ಲಿ ಬಂದ್‌ ಯಶಸ್ವಿಯಾಯಿತು.

ಬೆಂಗಳೂರು ಪಾಲಿಕೆ ಚುನಾವಣೆ ಅನಿಶ್ಚಿತ

ಬೆಂಗಳೂರು, ಜ. 5– ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಅನಿಶ್ಚಿತವಾಗಿದ್ದು, ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗದ ನಡುವೆ ಶೀತಲ ಸಮರ ನಡೆಯುತ್ತಿದೆ.

ತಮಿಳುನಾಡಿಗೆ ನೀರು ಬಿಟ್ಟಿರುವುದರಿಂದ ಕಾನೂನು ಸುವ್ಯವಸ್ಥೆ ಹದಗೆಡಬಹುದು ಎಂಬ ಕಾರಣ ನೀಡಿ ಚುನಾವಣೆ ಮುಂದೂಡುವುದು ಸೂಕ್ತ ಎಂಬ ನಿಲುವು ಸರ್ಕಾರದ್ದು. ಚುನಾವಣೆಗೆ ಇನ್ನೂ ಹನ್ನೆರಡು ದಿನಗಳಿರುವಾಗ ಇಲ್ಲದ ಪರಿಸ್ಥಿತಿ ಊಹಿಸಿ ಆತುರದ ಕ್ರಮ ಸಮಂಜಸವಲ್ಲ ಎಂಬುದು ಆಯೋಗದ ಬಿಗಿಪಟ್ಟು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು