ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಭಾನುವಾರ 06-10-1996

Last Updated 5 ಅಕ್ಟೋಬರ್ 2021, 15:16 IST
ಅಕ್ಷರ ಗಾತ್ರ

ಪೆರೇಸಂದ್ರ ದುರಂತ: ಆರೋಪಿಗಳ ಸೆರೆಗೆ ಪೊಲೀಸ್‌ ವಾರಂಟ್‌

ಮುಂಬೈ, ಅ. 5 (ಪಿಟಿಐ)– ಕೋಲಾರ ಜಿಲ್ಲೆಯ ಪೆರೇಸಂದ್ರದಲ್ಲಿ ನಡೆದ ಉಚಿತ ನೇತ್ರ ಚಿಕಿತ್ಸಾ ಶಿಬಿರದಲ್ಲಿ ನೀಡಲಾದ ಕಲಬೆರಕೆ ಮಾತ್ರೆ ತಯಾರಿಕಾ ಸಂಸ್ಥೆಯಾದ ಜರ್ಮನ್‌ ಬಹುರಾಷ್ಟ್ರೀಯ ಕಂಪನಿ ಬೋಹ್ರಿಂಗರ್‌ ಮ್ಯಾನ್‌ಹೆಮ್‌ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ 12 ಅಧಿಕಾರಿಗಳ ಬಂಧನಕ್ಕೆ ಥಾಣೆ ಪೊಲೀಸರು ಆದೇಶ ಹೊರಡಿಸಿದ್ದಾರೆ.

ಕಲಬೆರಕೆ ಮಾತ್ರೆಗಳಾದ ಕಾಸ್ಮಾಟ್‌ ಪೋರ್ಟೆಯನ್ನು ಸೇವಿಸಿ ಹಲವಾರು ಮಂದಿ ಅಸ್ವಸ್ಥರಾಗಿ ಇಬ್ಬರು ಮೃತರಾಗಿದ್ದರು. ಕಳಪೆ ಗುಣಮಟ್ಟ ಮತ್ತು ನಿರ್ಲಕ್ಷದ ಆರೋಪದ ಹಿನ್ನೆಲೆಯಲ್ಲಿ ಆಹಾರ ಮತ್ತು ಔಷಧಗಳ ನಿರ್ವಹಣಾ ಮಂಡಳಿಯು ಅ. 3ರಂದು ಪ್ರಥಮ ಮಾಹಿತಿ ವರದಿ ಸಲ್ಲಿಸಿದ್ದರಿಂದ ಪೊಲೀಸರು ಈ ಆದೇಶ ಜಾರಿಗೊಳಿಸಿದ್ದಾರೆ.

ಈರುಳ್ಳಿ, ಆಲೂಗಡ್ಡೆ ಸರ್ಕಾರದಿಂದ ಖರೀದಿ

ಬೆಂಗಳೂರು, ಅ. 5– ರಾಜ್ಯದಲ್ಲಿ ಭರಪೂರ ಬೆಳೆ ಬಂದಿರುವ ಆಲೂಗಡ್ಡೆ ಮತ್ತು ಈರುಳ್ಳಿ ಬೆಳೆದ ರೈತರ ‘ಕಣ್ಣಲ್ಲಿ ನೀರುಕ್ಕುವುದನ್ನು’ ತಡೆಯಲು ತೀರ್ಮಾನಿಸಿರುವ ಸರ್ಕಾರ ಈ ಬೆಳೆಯನ್ನು ಒರಿಸ್ಸಾ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳವೇ ಅಲ್ಲದೆ ಮಲೇಶಿಯಾ ಹಾಗೂ ಶ್ರೀಲಂಕಾಗಳಿಗೆ ರಫ್ತು ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT