ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ: ಸಂಸ್ಥಾ ಕಾಂಗ್ರೆಸ್ಸಿಗೆ ತಾರಕೇಶ್ವರಿ ರಾಜೀನಾಮೆ

Published 12 ಜೂನ್ 2024, 23:55 IST
Last Updated 12 ಜೂನ್ 2024, 23:55 IST
ಅಕ್ಷರ ಗಾತ್ರ

ಭಾರತದ ಜತೆ ಮಾತುಕತೆ ಪುನರ್‌ ಆರಂಭಿಸಲು ಪಾಕ್‌ಗೆ ಬ್ರಿಟನ್‌ ಸಲಹೆ

ನವದೆಹಲಿ, ಜೂನ್‌ 12– ಉಪಖಂಡದಲ್ಲಿ ಬಾಂಧವ್ಯವನ್ನು ಮಾಮೂಲು ಸ್ಥಿತಿಗೆ ತರಲು ಭಾರತದ ಜತೆ ಮಾತುಕತೆ ಪುನರಾರಂಭಿಸುವುದರ ಅಗತ್ಯವನ್ನು ಬ್ರಿಟನ್‌ ಸರ್ಕಾರವು ಪಾಕಿಸ್ತಾನಕ್ಕೆ ಮನವರಿಕೆ ಮಾಡಿಕೊಟ್ಟಿದೆ.

ಲಂಡನ್ನಿನಲ್ಲಿ ಬ್ರಿಟನ್ನಿನ ಸಚಿವರ ಜತೆ ಪಾಕಿಸ್ತಾನದ ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳ ಸ್ಟೇಟ್‌ ಸಚಿವ ಅಜೀಜ್‌ ಅಹ್ಮದ್‌ ಅವರು ಮಾತುಕತೆ ನಡೆಸಿದ ವೇಳೆ ಅವರಿಗೆ ಬ್ರಿಟನ್‌ ಸರ್ಕಾರದ ಈ ಅಭಿಪ್ರಾಯ ತಿಳಿಸಲಾಯಿತು ಎಂದು ಬಿಬಿಸಿ ಇಂದು ಉದ್ಧರಿಸಿತು.

ಪಾಕಿಸ್ತಾನದ ಸ್ಟೇಟ್‌ ಸಚಿವ ಅಜೀಜ್‌ ಅಹ್ಮದ್‌ ಅವರು ಬ್ರಿಟನ್ನಿನ ಸಚಿವರ ಜತೆ ಎರಡು ದಿನ ಮಾತುಕತೆ ನಡೆಸಿದರು.

ಸಂಸ್ಥಾ ಕಾಂಗ್ರೆಸ್ಸಿಗೆ ತಾರಕೇಶ್ವರಿ ರಾಜೀನಾಮೆ

ಪಟನಾ, ಜೂನ್‌ 12– ಸಂಸ್ಥಾ ಕಾಂಗ್ರೆಸ್‌ ನಾಯಕಿ ಶ್ರೀಮತಿ ತಾರಕೇಶ್ವರಿ ಸಿನ್ಹ ಅವರು ಇಂದು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.

ಅವರು ಸದ್ಯದಲ್ಲೇ ಆಡಳಿತ ಕಾಂಗ್ರೆಸ್‌ ಪಕ್ಷ ಸೇರುವ ನಿರೀಕ್ಷೆಯಿದೆ ಎಂದು ಬಲ್ಲವೃತ್ತಗಳು ತಿಳಿಸಿವೆ.

ಸಂಸ್ಥಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ ಮೆಹ್ತಾ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಶ್ರೀಮತಿ ತಾರಕೇಶ್ವರಿ ಸಿನ್ಹ ಅವರು ‘ರಾಷ್ಟ್ರದ ಎರಡೂ ಪಕ್ಷಗಳು ಒಗ್ಗೂಡುವಂಥ ಪರಿಸ್ಥಿತಿಯನ್ನುಂಟು ಮಾಡಿ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT