25 ವರ್ಷಗಳ ಹಿಂದೆ: ಭಾನುವಾರ, ಜನವರಿ 11, 1998

ಬಿಹಾರದಲ್ಲಿ ಮರುಕಳಿಸಿದ ಹತ್ಯಾಕಾಂಡ– 9 ಸಾವು
ಜೆಹನಾಬಾದ್ (ಬಿಹಾರ), ಜ. 10 (ಪಿಟಿಐ): ಲಕ್ಷ್ಮಣಪುರದಲ್ಲಿ ಈಚೆಗೆ ನಡೆದ ಸಾಮೂಹಿಕ ಹತ್ಯೆಯ ಹಿನ್ನೆಲೆಯಲ್ಲಿ ನಕ್ಸಲೀಯ ಸಂಘಟನೆಗೆ ಸೇರಿದ ಸಿಪಿಎಂಎಲ್ ಕಾರ್ಯಕರ್ತರು ಜೆಹನಾಬಾದ್ ಜಿಲ್ಲೆಯ ರಾಂ ಪುರಾಚುರನ್ ಗ್ರಾಮದಲ್ಲಿ ಶುಕ್ರವಾರ ರಾತ್ರಿ 9 ಮಂದಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಈ ಘಟನೆಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
ಸೋನಿಯಾ ದರ್ಶನಕ್ಕೆ ನೂಕು ನುಗ್ಗಲು
ನವದೆಹಲಿ, ಜ. 10– ಜನ ಮರುಳೋ, ಜಾತ್ರೆ ಮರುಳೋ ಎನ್ನುವ ನಾಣ್ಣುಡಿಯಂತೆ ಸೋನಿಯಾ ಗಾಂಧಿ ಅವರ ‘ಧರ್ಮ ದರ್ಶನ’ ಪಡೆಯಲು ಜನಜಾತ್ರೆ ನೂಕು ನುಗ್ಗಲು.
ಕಳೆದ ಮೂರ್ನಾಲ್ಕು ದಿನಗಳಿಂದ ಸೋನಿಯಾ ಗಾಂಧಿ ಅವರು ನಂ.10 ಜನಪತ್ ನ ತಮ್ಮ ಬಂಗಲೆಯ ಆವರಣದಲ್ಲಿ ತಮ್ಮನ್ನು ಪ್ರೀತಿ ವಿಶ್ವಾಸಗಳಿಂದ ಕಾಣಲು, ಅಭಿನಂದಿಸಲು ಬರುವ ಮಂದಿಗೆ ವಿಶೇಷವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ‘ಧರ್ಮ ದರ್ಶನ’ ವ್ಯವಸ್ಥೆ ಮಾಡಿದ್ದಾರೆ.
ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ಆರಂಭಿಸಲು ತಮ್ಮ ನಿರ್ಧಾರವನ್ನು ಪ್ರಕಟಿಸಿದ ಮೇಲೆ ಅವರ ನಿವಾಸ ಮತ್ತು ಪಕ್ಕದಲ್ಲಿಯೇ ಇರುವ ಅಕ್ಬರ್ ರಸ್ತೆಯ ಕಾಂಗ್ರೆಸ್ ಕಾರ್ಯಾಲಯ ಬಿಡುವಿಲ್ಲದ ಚಟುವಟಿಕೆಗಳ ತಾಣವಾಗಿ ಪರಿವರ್ತನೆಗೊಂಡಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.