ಸೋನಿಯಾ ನಾಯಕತ್ವಕ್ಕೆ ಪವಾರ್ ಬಣ ವಿರೋಧ
ನವದೆಹಲಿ, ಮಾರ್ಚ್ 8 (ಪಿಟಿಐ)– ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷ ಸ್ಥಾನವನ್ನು ಸೋನಿಯಾ ಗಾಂಧಿ ಅವರಿಗೆ ಬಿಟ್ಟುಕೊಡಲು ಮಾಜಿ ಸಚಿವ ಶರದ್ ಪವಾರ್ ಅವರ ಬಣ ತೀವ್ರ ವಿರೋಧಿಸಿದ್ದರಿಂದ ಸಂಸದೀಯ ನಾಯಕತ್ವ ವಿಚಾರದಲ್ಲಿ ಪಕ್ಷದಲ್ಲಿ ಭಿನ್ನಮತ ಉಂಟಾಗಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಮೃತ್ರಿಕೂಟದ ಸವಾಲನ್ನು ಎದುರಿಸಿ ಪಕ್ಷಕ್ಕೆ ಗೆಲುವು ತಂದುಕೊಟ್ಟ ಶರದ್ ಪವಾರ್ ಅವರಿಗೆ ನಾಯಕತ್ವ ನೀಡಬೇಕು ಎಂದು ಪವಾರ್ ಪರ ಬಣ ಒತ್ತಾಯಿಸಿದರೆ, ಪಕ್ಷದ ಹಿತದ ದೃಷ್ಟಿಯಿಂದ ಸೋನಿಯಾ ಗಾಂಧಿ ಅವರೇ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಕೆ.ವಿಜಯಭಾಸ್ಕರ ರೆಡ್ಡಿ ಅವರು ಹೇಳಿದ್ದಾರೆ. ಇನ್ನೊಂದು ಗುಂಪಿನ ಪ್ರಕಾರ ನಾಯಕತ್ವವನ್ನು ಉತ್ತರ ಭಾರತದವರಿಗೇ ವಹಿಸಿಕೊಡಬೇಕು ಎಂದು ಆಗ್ರಹಿಸಲಾಗಿದೆ.

ಬಾದಲ್ ಅಸ್ವಸ್ಥ: ಟಂಡನ್ ಹಂಗಾಮಿ ಮುಖ್ಯಮಂತ್ರಿ
ಬಟಿಂಡಾ, ಮಾರ್ಚ್ 8 (ಪಿಟಿಐ)– ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆಗಾಗಿ ಪಂಜಾಬಿನ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಇಂದು ಅಮೆರಿಕಕ್ಕೆ ತೆರಳಿದರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಬಾದಲ್ ಅವರ ಗೈರುಹಾಜರಿಯಲ್ಲಿ ಸ್ಥಳೀಯ ಸಂಸ್ಥೆ ಖಾತೆ ಸಚಿವ ಬಲರಾಮ್‌ದಾಸ್ ಟಂಡನ್ ಅವರು ಹಂಗಾಮಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವರು. ಬಾದಲ್ ಅವರು ವೈದ್ಯಕೀಯ ತಪಾಸಣೆ ಮುಗಿಸಿಕೊಂಡು ಒಂದು ವಾರದಲ್ಲೇ ಹಿಂತಿರುಗುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.