ಸರ್ಕಾರ ರಚನೆಗೆ ಬಿಜೆಪಿ, ರಾಷ್ಟ್ರೀಯ ರಂಗ ಪೈಪೋಟಿ
ನವದೆಹಲಿ, ಮೇ 10 (ಪಿಟಿಐ)– ದೆಹಲಿಯ ಗದ್ದುಗೆ ಹಿಡಿಯಲು ವಿವಿಧ ರಾಜಕೀಯ ಪಾಳಯಗಳಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದ್ದು, ಪಿ.ವಿ.ನರಸಿಂಹ ರಾವ್ ನೇತೃತ್ವದ ಸರ್ಕಾರ ರಾಜೀನಾಮೆ ನೀಡಿದೆ. ಯಾವ ಪಕ್ಷಕ್ಕೂ ಪೂರ್ಣ ಬಹುಮತ ಸಿಗದ ಪರಿಸ್ಥಿತಿಯಲ್ಲಿ ಕೇಂದ್ರದಲ್ಲಿ ಸರ್ಕಾರ ರಚಿಸಲು ಒಂದೆಡೆ ಬಿಜೆಪಿ ಪ್ರಯತ್ನ ನಡೆಸಿದರೆ, ಇನ್ನೊಂದೆಡೆ ರಾಷ್ಟ್ರೀಯ ರಂಗ ಮತ್ತು ಎಡರಂಗ ಕೂಡಾ ಬಿಜೆಪಿ ಹೊರತಾದ ಸಮ್ಮಿಶ್ರ ಸರ್ಕಾರ ರಚನೆ ಯತ್ನಗಳನ್ನು ಆರಂಭಿಸಿವೆ.

ಭಾಷಾ ವಿಜ್ಞಾನಿ ಬಿಳಿಗಿರಿ ನಿಧನ
ಬೆಂಗಳೂರು, ಮೇ 10– ಕನ್ನಡದ ಭಾಷಾ ವಿಜ್ಞಾನಿ ಹಾಗೂ ಕವಿ ಡಾ. ಎಚ್.ಎಸ್. ಬಿಳಿಗಿರಿ (71) ಅವರು ಇಂದು ಬೆಳಿಗ್ಗೆ ನವದೆಹಲಿಯಲ್ಲಿ ನಿಧನರಾದರು.

ಬಿಳಿಗಿರಿ ಅವರಿಗೆ ಖ್ಯಾತಿ ತಂದುಕೊಟ್ಟ ಕೃತಿ ‘ಆಲೋಕ’. ಕೇಶಿರಾಜನ ಶಬ್ದಮಣಿ ದರ್ಪಣಕ್ಕೆ ಅವರು ಬರೆದ ವ್ಯಾಖ್ಯಾನ ಈ ಕೃತಿ. ‘ವರ್ಣನಾತ್ಮಕ ವ್ಯಾಕರಣದ ಮೂಲತತ್ವಗಳು’, ‘ವರಸೆಗಳು’ ಅವರ ಇನ್ನೆರಡು ಪ್ರಮುಖ ಕೃತಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.