ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಭಾನುವಾರ, 12-5-1996

Last Updated 11 ಮೇ 2021, 19:31 IST
ಅಕ್ಷರ ಗಾತ್ರ

ಕಾಂಗೈ ಬೆಂಬಲಕ್ಕೆ ರಾಷ್ಟ್ರೀಯರಂಗ ಯತ್ನ
ನವದೆಹಲಿ, ಮೇ 11 (ಪಿಟಿಐ)–
ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚಿಸುವ ನಿಟ್ಟಿನಲ್ಲಿ ಎಡರಂಗ ಮತ್ತು ಜನತಾದಳ ಇಂದು ಗಂಭೀರ ಪ್ರಯತ್ನಗಳನ್ನು ಆರಂಭಿಸಿದವು. ಸಿಪಿಎಂ ಮುಖಂಡರಾದ ಜ್ಯೋತಿ ಬಸು ಮತ್ತು ಹರ್‌ಕಿಶನ್‌ಸಿಂಗ್‌ ಸುರ್ಜಿತ್‌ ಅವರು ಇಂದು ರಾಷ್ಟ್ರಪತಿಯನ್ನು ಭೇಟಿಯಾಗಿ ಸರ್ಕಾರ ರಚಿಸಲು ಆಹ್ವಾನಿಸುವಂತೆ ಕೋರಿದರು.

ಈ ಮಧ್ಯೆ ಜನತಾದಳವು, ಒಂದೋ ತಾನು ಸರ್ಕಾರ ರಚಿಸಲು ಕಾಂಗ್ರೆಸ್‌ ಬೇಷರತ್‌ ಬೆಂಬಲ ನೀಡಬೇಕು, ಇಲ್ಲವಾದರೆ ಪಿ.ವಿ.ನರಸಿಂಹ ರಾವ್‌ ಹೊರತಾದ ಕಾಂಗ್ರೆಸ್‌ ನೇತೃತ್ವದ ಸರ್ಕಾರಕ್ಕೆ ಜನತಾದಳ ಬೆಂಬಲ ನೀಡುತ್ತದೆ ಎಂದು ಘೋಷಿಸಿದೆ.

ಸರ್ಕಾರ ರಚನೆಗೆ ಬಿಜೆಪಿ ಯತ್ನ
ನವದೆಹಲಿ, ಮೇ 11 (ಪಿಟಿಐ)–
ಬಿಜೆಪಿ ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಸರ್ಕಾರದ ನೇತೃತ್ವ ವಹಿಸುವಂತೆ ಆಹ್ವಾನ ನೀಡಬೇಕೆಂದು ರಾಷ್ಟ್ರಪತಿ ಶಂಕರ್‌ ದಯಾಳ್‌ ಶರ್ಮಾ ಅವರಿಗೆ ಮನವಿ ಮಾಡುವ ಮೂಲಕ ಪಕ್ಷ ಕೇಂದ್ರದಲ್ಲಿ ಅಧಿಕಾರ ಪಡೆಯುವತ್ತ ತನ್ನ ಮೊದಲ ಹೆಜ್ಜೆಯಿರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT