ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಬುಧವಾರ 04–09–1996

Last Updated 3 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಅಮೆರಿಕ– ಇರಾಕ್ ಯುದ್ಧ ಆರಂಭ
ಬಾಗ್ದಾದ್, ಸೆ. 3 (ಪಿಟಿಐ)–
ಅಮೆರಿಕ ಸೇನೆ ಇಂದು ಇರಾಕ್‌ನ ಪ್ರಮುಖ ಮಿಲಿಟರಿ ನೆಲೆಗಳು ಮತ್ತು ಕ್ಷಿಪಣಿ ನೆಲೆಗಳ ಮೇಲೆ ಕ್ಷಿಪ್ರ ಕ್ಷಿಪಣಿ ದಾಳಿ ನಡೆಸಿ ಬಾಗ್ದಾದ್‌ನ ಹಲವು ಪ್ರಮುಖ ಸೇನಾ ನೆಲೆಗಳನ್ನು ಧ್ವಂಸಗೊಳಿಸಿದೆ.

ಅಮೆರಿಕದ ಮಾನವ ರಹಿತ ಮತ್ತು ಅತಿ ನಿಖರವಾದ ಕ್ಷಿಪಣಿಗಳು ಇರಾಕ್‌ನ ಮಿಲಿಟರಿ ನಿಯಂತ್ರಣ ಕೇಂದ್ರಗಳನ್ನು ನುಚ್ಚುನೂರುಗೊಳಿಸಿವೆ ಎಂದು ಅಮೆರಿಕ ರಕ್ಷಣಾ ಮೂಲಗಳು ತಿಳಿಸಿವೆ.

ಈ ಮಧ್ಯೆ ಇರಾಕ್‌ನ ವಾಯು ಪ್ರದೇಶದಲ್ಲಿ ಸಂಚರಿಸುವ ವಿದೇಶಿ ಯುದ್ಧವಿಮಾನಗಳನ್ನು ಹೊಡೆದು ಉರುಳಿಸುವಂತೆ ಸೇನೆಗೆ ಅಧ್ಯಕ್ಷ ಸದ್ದಾಂ ಹುಸೇನ್ ಆದೇಶಿಸಿದ್ದಾರೆ. ‘ಪ್ರತಿಕಾರದ ಕ್ರಮಕ್ಕೆ ನಾವು ಸಿದ್ಧರಿದ್ದೇವೆ’ ಎಂದು ಸದ್ದಾಂ ಇರಾಕಿ ರೇಡಿಯೊ ಮತ್ತು ದೂರದರ್ಶನದ ಮೂಲಕ ಸವಾಲು ಹಾಕುವುದರೊಂದಿಗೆ ದಾಳಿಯ ಪರಿಣಾಮ ತೀವ್ರಗೊಳ್ಳುವ ನಿರೀಕ್ಷೆ ಇದ್ದು, ಯುದ್ಧ ಆರಂಭವಾಗಿದೆ.

ತೀವ್ರ ಬಿಕ್ಕಟ್ಟಿನಲ್ಲಿ ಗುಜರಾತ್ ಸರ್ಕಾರ
ಗಾಂಧಿನಗರ, ಸೆ. 3 (ಪಿಟಿಐ, ಯುಎನ್‌ಐ)–
ಗುಜರಾತ್ ಮುಖ್ಯಮಂತ್ರಿ ಸುರೇಶ್ ಮೆಹತಾ ಅವರ ಸರ್ಕಾರದ ವಿಶ್ವಾಸಮತ ಸಾಬೀತಿಗಾಗಿ ಇಂದು ಕರೆಯಲಾಗಿದ್ದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ವಿಶ್ವಾಸಮತ ನಿರ್ಣಯದ ವಿಷಯ ಪ್ರಸ್ತಾಪಕ್ಕೇ ಬರಲಿಲ್ಲ. ಆಡಳಿತ ಬಿಜೆಪಿಯಿಂದ ಬೇರೆಯಾದ ಗುಂಪಿಗೆ ಉಪಸಭಾಧ್ಯಕ್ಷರು ಮಾನ್ಯತೆ ನೀಡುವುದರೊಂದಿಗೆ ವಿಧಾಸಭೆಯಲ್ಲಿ ಬಿಜೆಪಿ ಬಲ 74ಕ್ಕೆ ಕುಸಿದಿದ್ದು, ಸರ್ಕಾರ ಪತನದ ಅಂಚಿನಲ್ಲಿದೆ.

ವಿಧಾನಸಭೆಯಲ್ಲಿ ಬಿಜೆಪಿ ಎರಡು ಗುಂಪುಗಳ ನಡುವಿನ ಜಗಳ ಮಾರಾಮಾರಿ ಹಂತಕ್ಕೆ ಬಂದು ಸಭೆಯಲ್ಲಿ ಕಂಡು ಕೇಳರಿಯದ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಒಂದೇ ದಿನ ಕಲಾಪವನ್ನು ಎರಡು ಬಾರಿ ಅನಿರ್ದಿಷ್ಟಾವಧಿಗೆ ಮುಂದೂಡಿದ ಘಟನೆಯೂ ನಡೆಯಿತು. ಇದರಿಂದಾಗಿ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT