ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಶುಕ್ರವಾರ, 17-5-1996

Last Updated 16 ಮೇ 2021, 19:30 IST
ಅಕ್ಷರ ಗಾತ್ರ

ಮಹಾಜನ್‌ಗೆ ರಕ್ಷಣಾ ಖಾತೆ, ಜಸವಂತ ಸಿಂಗ್‌ಗೆ ಹಣಕಾಸು ಖಾತೆ

ನವದೆಹಲಿ, ಮೇ 16 (ಯುಎನ್‌ಐ, ಪಿಟಿಐ)– ಕೇಂದ್ರದಲ್ಲಿ ಪ್ರಥಮ ಬಾರಿಗೆ ರಚನೆಯಾದ ಭಾರತೀಯ ಜನತಾ ಪಕ್ಷ– ಶಿವಸೇನೆ ನೇತೃತ್ವದ ಸಮ್ಮಿಶ್ರ ಸರ್ಕಾರದ ಮುಖ್ಯಸ್ಥ, ಬಿಜೆಪಿ ನಾಯಕ ಅಟಲ್‌ ಬಿಹಾರಿ ವಾಜಪೇಯಿ ಅವರು ಭಾರತದ ಹನ್ನೊಂದನೇ ಪ್ರಧಾನ ಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು.

ವಾಜಪೇಯಿ ಜತೆಗೆ ಹನ್ನೊಂದು ಸಂಪುಟ ದರ್ಜೆ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಮಹತ್ವದ ರಕ್ಷಣಾ ಮತ್ತು ಸಂಸದೀಯ ವ್ಯವಹಾರ ಖಾತೆಯನ್ನು ಪ್ರಮೋದ್‌ ಮಹಾಜನ್‌, ಜಸವಂತ ಸಿಂಗ್‌ ಹಣಕಾಸು ಖಾತೆಯನ್ನು ನೋಡಿಕೊಳ್ಳುವರು. ಕರ್ನಾಟಕದ ವಿ.ಧನಂಜಯ ಕುಮಾರ್‌ ಅವರಿಗೆ ನಾಗರಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ ಖಾತೆ ದೊರೆತಿದೆ.

‘ಕುದುರೆ ವ್ಯಾಪಾರ’: ರಂಗದ ಶಂಕೆ

ನವದೆಹಲಿ, ಮೇ 16 (ಯುಎನ್‌ಐ)– ಬಹುಮತ ಸಾಬೀತಿಗೆ ವಾಜಪೇಯಿ ಅವರಿಗೆ 15 ದಿನಗಳ ಅವಧಿ ನೀಡಿದ್ದು ‘ಕುದುರೆ ವ್ಯಾಪಾರ’ಕ್ಕೆ ಕಾರಣವಾಗುತ್ತದೆ, ಆದ್ದರಿಂದ ಇನ್ನು ಕೆಲವೇ ದಿನಗಳಲ್ಲಿ ಸಂಸತ್‌ ಅಧಿವೇಶನ ಕರೆಯಬೇಕು ಎಂದು ತೃತೀಯ ರಂಗದ ನಾಯಕರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT