ಮಂಗಳೂರು, ಆ. 14– ‘ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡದಿರಲು ಪುರುಷ ಪ್ರಧಾನ ಸಮಾಜವೇ ಕಾರಣ. ಇದಕ್ಕೆ ಬಿಜೆಪಿಯೂ ಹೊರತಲ್ಲ’ ಎಂದು ಸುಷ್ಮಾ ಸ್ವರಾಜ್ ಟೀಕಿಸಿದ್ದಾರೆ.
ಪುತ್ತೂರಿನಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆಯ ಸಂದರ್ಭದಲ್ಲಿ ವಿಪಕ್ಷಗಳು ಅದನ್ನು ಪ್ರತಿರೋಧಿಸಿದ್ದನ್ನು ಪ್ರಸ್ತಾಪಿಸಿ, ಮತ್ತೊಮ್ಮೆ ಮಸೂದೆ ಮಂಡಿಸುವ ವೇಳೆಗೆ ಸರ್ಕಾರ ಉರುಳಿತು ಎಂದರು.
ಹಠಾತ್ ದಾಳಿ ವಿರುದ್ಧ ಎಚ್ಚರಿಕೆ
ನವದೆಹಲಿ, ಆ. 14 (ಪಿಟಿಐ)– ಪಾಕಿಸ್ತಾನ ದಿಂದ ಬರಬಹುದಾದ ಹಠಾತ್ ಆಕ್ರಮಣಕ್ಕೆ ಸಿದ್ಧರಾಗಿರುವಂತೆ ಇಂದು ದೇಶಕ್ಕೆ ಎಚ್ಚರಿಕೆ ನೀಡಿದ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು, ರಕ್ಷಣಾ ವೆಚ್ಚವನ್ನು ಏರಿಸಿ ದೇಶದ ಸೈನ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವಂತೆ ಸಲಹೆ ಮಾಡಿದರು.
ಸ್ವಾತಂತ್ರ್ಯೋತ್ಸವದ ಮುನ್ನಾದಿನದ ಭಾಷಣದಲ್ಲಿ ಅವರು ಪಾಕಿಸ್ತಾನದ ಹಿಂದಿನ ನಡವಳಿಕೆ ಉದಾಹರಿಸಿ, ಸೈನ್ಯಕ್ಕೆ ಅತ್ಯಾಧುನಿಕ ಶಸ್ತ್ರಗಳನ್ನು ಒದಗಿಸಬೇಕು ಎಂದರು.