ಶುಕ್ರವಾರ, 2–2–1973: ಕಾಂಗ್ರೆಸ್ಸಿಗರಿಗೆ ಕರೆ

ಐದನೇ ಯೋಜನೆ ಜಾರಿಗೆ ಶ್ರಮಿಸಲು ಕಾಂಗ್ರೆಸ್ಸಿಗರಿಗೆ ಕರೆ
ನವದೆಹಲಿ, ಫೆ. 1– ಐದನೆಯ ಯೋಜನೆ ಜಾರಿಗೆ ಬರಲು ಕಾಂಗ್ರೆಸ್ ಸದಸ್ಯರು ಸಕ್ರಿಯಾತ್ಮಕವಾಗಿ ಸಹಕರಿಸಬೇಕೆಂದು ಪ್ರಧಾನಿ ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಡಾ. ಶಂಕರದಯಾಳ್ ಶರ್ಮ ಅವರು ದೇಶದ ಎಲ್ಲ ಕಾಂಗ್ರೆಸ್ ನಾಯಕರಿಗೆ ಇಂದು ಕರೆ ನೀಡಿದರು. ಯೋಜನೆ ಕಾರ್ಯಕ್ರಮ ಮತ್ತು ಸಾಮಾಜಿಕ– ಆರ್ಥಿಕ ಸುಧಾರಣೆಗೆ ಕ್ರಮಗಳು ಜಾರಿಗೆ ಬರುವುದನ್ನು ಪೂರ್ತಿ ಆಡಳಿತಾಂಗದ ಮೇಲೆ ಹೊರಿಸುವುದ ರಲ್ಲಿ ಇರುವ ಅಪಾಯದ ವಿರುದ್ಧ ಅವರು ಎಚ್ಚರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.