ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಮಾರ್ಚ್ 17, 1973

Last Updated 16 ಮಾರ್ಚ್ 2023, 22:44 IST
ಅಕ್ಷರ ಗಾತ್ರ

ಕೇಂದ್ರ ಸಚಿವ ಕರಣ್‌ ಸಿಂಗ್‌ ರಾಜೀನಾಮೆ
ನವದೆಹಲಿ, ಮಾರ್ಚ್‌ 16–
ಕೇಂದ್ರ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಖಾತೆ ಸಚಿವ ಡಾ. ಕರಣ್‌ ಸಿಂಗ್‌ ಅವರು ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಹಠಾತ್ತನೆ ಪ್ರಕಟಿಸಿ ಲೋಕಸಭೆಯನ್ನು ಚಕಿತಗೊಳಿಸಿದರು.

ಗುರುವಾರ ಸಿಕಂದರಾಬಾದ್‌ನಲ್ಲಿ ಸಂಭವಿಸಿದ ಎಚ್‌.ಎಸ್‌. 784 ತರಬೇತಿ ವಿಮಾನ ಅಪಘಾತದ ನೈತಿಕ ಹೊಣೆಯನ್ನು ಹೊತ್ತುಕೊಂಡು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಮುಜೀಬ್‌ ಪ್ರಮಾಣ ಸ್ವೀಕಾರ
ಢಾಕಾ, ಮಾರ್ಚ್‌ 16–
ಬಾಂಗ್ಲಾ ದೇಶದ ಪ್ರಧಾನಿಯಾಗಿ ಷೇಖ್‌ ಮುಜೀಬುರ್‌ ರೆಹಮಾನ್‌ ಅವರು ಇಂದು ಅಧ್ಯಕ್ಷ ಅಬು ಸಯೀದ್‌ ಚೌಧುರಿ ಅವರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಅವರ ಸಂಪುಟದ ಇಪ್ಪತ್ತು ಸದಸ್ಯರೂ ಅವರ ಜತೆ ಪ್ರಮಾಣವಚನ ಸ್ವೀಕರಿಸಿದರು.

ಮೊದಲಿದ್ದ ಇಪ್ಪತ್ಮೂರು ಸದಸ್ಯರ ಸಂಪುಟದಲ್ಲಿನ ಮೂವರು ಸಚಿವರನ್ನು ಕೈಬಿಡಲಾಗಿದೆ. ಅವರು: ವಾಣಿಜ್ಯ ಸಚಿವ ಸಿದ್ದಿಕಿ, ಅಂಚೆ ಮತ್ತು ತಂತಿ ಸಚಿವ ಜಲಾಲುದ್ದೀನ್‌ ಮತ್ತು ಪೌರಾಡಳಿತ ಸಚಿವ ಶಂಸುಲ್‌ ಹಕ್‌. ಮನೋರಂಜನ್‌ ಧರ್‌ ಹೊಸದಾಗಿ ಸಂಪುಟವನ್ನು ಸೇರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT