ಕೇರಳ ಸಂಯುಕ್ತ ರಂಗ ಬಿಕ್ಕಟ್ಟು ಇನ್ನಷ್ಟು ಉಲ್ಬಣ
ತಿರುವನಂತಪುರ, ಮೇ 11: ಹಣಕಾಸು ಮಂತ್ರಿ ಶ್ರೀ ಸಿ.ಕೆ. ಕುಂಜು ಅವರ ವಿರುದ್ಧ ಮುಖ್ಯಮಂತ್ರಿ ಶ್ರೀ ಇ.ಎಂ.ಎಸ್. ನಂಬೂದಿರಿಪಾಡ್ ಅವರು ಕೈಗೊಂಡ ಕ್ರಮದ ಪರಿಣಾಮವಾಗಿ ಕೇರಳ ಸಂಯುಕ್ತ ರಂಗದಲ್ಲಿ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿ ಸಂಯುಕ್ತ ರಂಗ ಸರ್ಕಾರವು ಅನಿಶ್ಚಿತ ಪರಿಸ್ಥಿತಿಯಲ್ಲಿ ಸಿಲುಕಿದೆ.

ಜಿ.ನಾರಾಯಣ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರು

ಬೆಂಗಳೂರು, ಮೇ 11: ನಗರದ ಮಾಜಿ ಮೇಯರ್ ಹಾಗೂ ‘ವಿನೋದ್’ ಪತ್ರಿಕೆಯ ಸಂಪಾದಕ ಶ್ರೀ.ಜಿ. ನಾರಾಯಣ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಇಲ್ಲಿ 620 ಮತಗಳ ಬಹುಮತದಿಂದ ಚುನಾಯಿತರಾದರು.

ಅಧ್ಯಕ್ಷ ಪದವಿ ಅವಧಿ ಮೂರು ವರ್ಷಗಳು.

ಇನ್ನೆರಡು ಉಕ್ಕು ಕಾರ್ಖಾನೆ
ನವದೆಹಲಿ, ಮೇ 11: ಐದನೇ ಯೋಜನೆಯಲ್ಲಿ ಒಂದೆರಡು ಸಂಪೂರ್ಣ ಸ್ವದೇಶಿ ಉಕ್ಕು ಕಾರ್ಖಾನೆಗಳನ್ನು ಸ್ಥಾಪಿಸಲಾಗುವುದು ಎಂದು ಉಕ್ಕು ಸಚಿವ ಎಂ. ಪೂಣಚ್ಚ ಇಂದು ಇಲ್ಲಿ ಸೂಚನೆ ಇತ್ತರು.

ಅಂದಾಜು ಮಾಡಲಾಗಿರುವ ಮೂವತ್ತು ಲಕ್ಷ ಟನ್ ಉಕ್ಕು ಉತ್ಪನ್ನಗಳ ಕೊರತೆಯನ್ನು ತುಂಬಲು ಈ ಕಾರ್ಖಾನೆಗಳ ಸ್ಥಾಪನೆ.

ಕೊರತೆಯನ್ನು ನೀಗಲು ಈ ಹೊಸ ಸಾಮರ್ಥ್ಯಗಳ ಸೃಷ್ಟಿಯನ್ನು ಯೋಜನಾ ಆಯೋಗ ಪರಿಶೀಲಿಸುತ್ತಿದೆ. ಒಪ್ಪಿಗೆ ದೊರೆತ ಕೂಡಲೇ ಈಗಲಿಂದಲೇ ಮುಂಗಡ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಸಿಂಹಳದಲ್ಲಿ ತಮಿಳು ಚಲನ ಚಿತ್ರಗಳ ವಿರುದ್ಧ ಶೀಘ್ರವೇ ನಿಷೇಧಾಜ್ಞೆ?
ಕೊಲಂಬೊ ಮೇ11: ಭಾರತೀಯ ಚಲನಚಿತ್ರಗಳು ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತೀಯ ಚಲನಚಿತ್ರಗಳ ಪ್ರದರ್ಶನವನ್ನು ಸಿಂಹಳದಲ್ಲಿ ಸರ್ಕಾರ ಶೀಘ್ರವೇ ನಿಷೇಧಿಸಬೇಕೆಂದು ಸಿಂಹಳ ಗೃಹ ಮಂತ್ರಿ ಡಾ. ಡಬ್ಲ್ಯೂ ಧನನಾಯಕ ಅವರು ಸಚಿವ ಸಂಪುಟಕ್ಕೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಪ್ರಾರ್ಥಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.