ಭಾನುವಾರ, ಏಪ್ರಿಲ್ 11, 2021
33 °C

50 ವರ್ಷಗಳ ಹಿಂದೆ: ಮಂಗಳವಾರ 2–3–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರೋಜಿನಿ ಮಹಿಷಿ ಅವರ ಸೋಲಿಗಾಗಿ ವಿಶ್ವಪ್ರಯತ್ನ

ಧಾರವಾಡ, ಮಾರ್ಚ್‌ 1– ಗೆಲ್ಲಲೇಬೇಕೆಂಬ ವಿಶ್ವಪ್ರಯತ್ನ– ಸೋಲಿಸಲೇಬೇಕೆಂಬ ಜಿದ್ದಿನ ನಡುವೆ ಹೋರಾಟ
ನಡೆಯುತ್ತಿರುವ ಧಾರವಾಡ ಉತ್ತರ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಪ್ರಮಾಣದಲ್ಲಿನ ಮತದಾನವು ಆಡಳಿತ ಕಾಂಗ್ರೆಸ್ ಅಭ್ಯರ್ಥಿಯ ಜಯಕ್ಕೆ ಕಾರಣವಾಗುವ ಸಂಭವವಿದೆ.

ಕೇಂದ್ರ ಸರ್ಕಾರದ ಉಪಸಚಿವೆ ಡಾ. ಸರೋಜಿನಿ ಮಹಿಷಿ ಹಾಗೂ ಸಂಸ್ಥಾ ಕಾಂಗ್ರೆಸ್ಸಿನ ಶ್ರೀ ಆರ್.ಜಿ.ವಾಲಿ ಅವರುಗಳ ನಡುವೆ ಸ್ಪರ್ಧೆಯಿರುವ ಕ್ಷೇತ್ರದಲ್ಲಿ ಆಡಳಿತ ಕಾಂಗ್ರೆಸ್ಸಿಗರು ಈ ನಿರೀಕ್ಷೆಯಿಂದ ಪ್ರಯತ್ನ
ಮಾಡುತ್ತಿದ್ದಾರೆ.

ಏಳು ರಾಜ್ಯಗಳಲ್ಲಿ ಶಾಂತಿಯುತ ಮತದಾನ

ನವದೆಹಲಿ, ಮಾರ್ಚ್‌ 1– ಲೋಕಸಭೆಯ 101 ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ಮತ್ತು ಇತರೆ 79 ಕ್ಷೇತ್ರಗಳ ಕೆಲವೆಡೆ ಮೊದಲ ಹಂತದ ಚುನಾವಣೆಯಲ್ಲಿ ಇಂದು ಮತದಾನ ಮುಕ್ತಾಯವಾಯಿತು.

ಬಿಹಾರದಲ್ಲಿ ಕೆಲವೆಡೆ ಘರ್ಷಣೆ, ಮತಪೆಟ್ಟಿಗೆ ಕಳವು, ಎರಡು ಸಾವು; ಭೋಪಾಲ್‌ನಲ್ಲಿ ನಡೆದ ಘರ್ಷಣೆಯಲ್ಲಿ ನಾಲ್ವರಿಗೆ ಗಾಯ ಮುಂತಾದ ಸಣ್ಣಪುಟ್ಟ ಘಟನೆಗಳ ವಿನಾ ಉಳಿದೆಡೆ ಸಾಮಾನ್ಯವಾಗಿ ಶಾಂತಿಯುತವಾಗಿಯೇ ನಡೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು