ಭಾನುವಾರ, ಜೂನ್ 26, 2022
21 °C

50 ವರ್ಷಗಳ ಹಿಂದೆ: ಶುಕ್ರವಾರ 4.6.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂಡಾನಿನಿಂದ ಆಮದು ನಿಲ್ಲಿಸಿ ರಾಜ್ಯದಲ್ಲಿ ಹತ್ತಿ ಸಂಗ್ರಹ ಕರಗಿಸಲು ಕೇಂದ್ರಕ್ಕೆ ಸಲಹೆ

ಬೆಂಗಳೂರು, ಜೂನ್ 3– ಮೈಸೂರು ರಾಜ್ಯದಲ್ಲಿ ವ್ಯಾಪಾರಿಗಳು ಮತ್ತು ಗಿರಣಿ ಗಳು ಕೊಳ್ಳದೆ ರೈತರಲ್ಲಿ ಕೋಟ್ಯಂತರ ರೂ. ಬೆಲೆ ಹತ್ತಿ ದಾಸ್ತಾನು ಉಳಿದಿರುವ ಬಗ್ಗೆ ಶೀಘ್ರ ಪರಿಹಾರ ಸೂಚಿಸುವ ಭರವಸೆ ಯನ್ನು ಕೇಂದ್ರವು ರಾಜ್ಯ ಸರ್ಕಾರಕ್ಕೆ ನೀಡಿದೆಯೆಂದು ತಿಳಿದುಬಂದಿದೆ. 

ದೇಶದಲ್ಲಿಯೇ ಗಿರಣಿಗಳು ಕೊಳ್ಳದ ‘ಲಾಂಗ್ ಸ್ಟೇಪಲ್’ ಹತ್ತಿ ರೈತರ ಬಳಿ ಉಳಿದು ಹೋಗಿರುವಾಗ ಸೂಡಾನಿನಿಂದ ಹತ್ತಿ ಆಮದು ಮಾಡಿಕೊಳ್ಳುವ ಔಚಿತ್ಯವನ್ನು ರಾಜ್ಯ ಸರ್ಕಾರದ ವಲಯಗಳಲ್ಲಿ ಪ್ರಶ್ನಿಸಲಾಗುತ್ತಿದೆ.

ಚೀನಾದ ಖಂಡಾಂತರ ಕ್ಷಿಪಣಿ ಪ್ರಯೋಗ ಸಿದ್ಧತೆ: ರಾಜ್ಯಸಭೆ ಕಳವಳ

ನವದೆಹಲಿ, ಜೂನ್ 3– ಹಿಂದೂ ಮಹಾಸಾಗರದಲ್ಲಿ ಚೀನಾ ಖಂಡಾಂತರ ಕ್ಷಿಪಣಿಯೊಂದರ ಪರೀಕ್ಷಾ ಪ್ರಯೋಗ ನಡೆಸಲಿದೆಯೆಂಬ ವರದಿಗಳ ಬಗೆಗೆ ರಾಜ್ಯಸಭೆಯಲ್ಲಿ ಇಂದು ಸದಸ್ಯರು ಕಳವಳ ವ್ಯಕ್ತಪಡಿಸಿದರು.

ಬೆಳೆಯುತ್ತಿರುವ ಚೀನಾದ ಅಣ್ವಸ್ತ್ರ ಶಕ್ತಿ ಮತ್ತು ಅದರಿಂದ ಭಾರತಕ್ಕಿರುವ ಅಪಾಯವನ್ನು ಸಕಾಲದಲ್ಲಿ ಅರಿತು ಸಣ್ಣದಾಗಿಯಾದರೂ ಅಣುಬಾಂಬ್ ತಯಾ ರಿಸುವ ಪ್ರಯತ್ನಕ್ಕೆ ಕೈ ಹಾಕುವಂತೆ ಅವರು ಸರ್ಕಾರವನ್ನು ಒತ್ತಾಯಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು