ಸೋಮವಾರ, ಡಿಸೆಂಬರ್ 5, 2022
19 °C

50 ವರ್ಷಗಳ ಹಿಂದೆ | ಭಾನುವಾರ, 19 ನವೆಂಬರ್‌ 1972

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಕ್‌ನಿಂದ ಆಧಾರರಹಿತ ಆಪಾದನೆ: ಭಾರತದ ನಿರಾಕರಣೆ
ದೆಹಲಿ, ನವೆಂಬರ್‌ 18–
ಭಾರತ–ಪಾಕಿಸ್ತಾನದ ಗಡಿಯುದ್ದಕ್ಕೂ ಭಾರತವು ಬೇಕೆಂದೇ ಉದ್ವೇಗ, ಬಿಕ್ಕಟ್ಟುಗಳನ್ನು ಹೆಚ್ಚಿಸುತ್ತಿದೆಯೆಂಬ ಹಾಗೂ ಭಾರತದ ಪಡೆಗಳು ಕಳೆದ ಕೆಲವು ದಿನಗಳಲ್ಲಿ ಅನೇಕ ಬಾರಿ ಗಡಿಯನ್ನು ಉಲ್ಲಂಘಿಸಿವೆ ಎಂಬ ಪಾಕಿಸ್ತಾನದ ಆಪಾದನೆ ನಿರಾಧಾರ ಹಾಗೂ ಕಿಡಿಗೇಡಿತನದ್ದೆಂದು ಅಧಿಕೃತ ವಲಯಗಳು ಇಂದು ಇಲ್ಲಿ ತಿಳಿಸಿದವು.

ಕಾಶ್ಮೀರದ ಹಾಜಿರ್‌ ಕ್ಷೇತ್ರದಲ್ಲಿ ಭಾರತದ ಪಡೆಗಳು ಅನೇಕ ಬಾರಿ ಗಡಿ ಉಲ್ಲಂಘಿಸಿವೆ ಎಂದೂ ಕಳೆದ ಗುರುವಾರ ಪಂಜಾಬಿನಲ್ಲಿನ ಸುಲೇಮಾನ್‌ಕಿ ಕ್ಷೇತ್ರದಲ್ಲಿನ ಪಾಕಿಸ್ತಾನಿ ನೆಲೆಗಳ ಮೇಲೆ ಭಾರತದ ಪಡೆಗಳು ಗುಂಡು ಹಾರಿಸಿದವೆಂದೂ ಪಾಕಿಸ್ತಾನ ಸರ್ಕಾರದ ವಕ್ತಾರರು ಆಪಾದಿಸಿದ್ದಾರೆಂದು ಇಸ್ಲಾಮಾಬಾದ್‌ನಿಂದ ಯು.ಪಿ.ಐ ವರದಿ ಮಾಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು