ಬೆಂಗಳೂರು, ಆ. 12– 1965ರಲ್ಲಿ ಆರಂಭವಾಗಿ 1968ರ ಮಾರ್ಚ್ ತಿಂಗಳಲ್ಲಿ ಅಂತ್ಯಗೊಂಡ ಒಪ್ಪಂದವೊಂದನ್ನು ಪಾಲಿಸಲು, ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯು 1970ರಲ್ಲಿ 9,633 ಜತೆ ಪಠಾಣ್ ಚಪ್ಪಲಿಗಳನ್ನು ಖರೀದಿಸಿತು.
1970ರ ಜುಲೈ ತಿಂಗಳಲ್ಲಿ ಒಪ್ಪಂದದ ನವೀಕರಣವಾಯಿತು. ಅದರ ಪ್ರಕಾರ, ಚಪ್ಪಲಿ ಬದಲು ಷೂಗಳನ್ನು ಕೊಡಬೇಕೆಂದಾಯಿತು. ಅದರ ಪರಿಣಾಮವಾಗಿ, ಹಂಚಿ ಉಳಿದ 2,000 ಜತೆ ಚಪ್ಪಲಿಗಳು ಮೂಲೆಗುಂಪು. ಅದರ ಮಾರಾಟಕ್ಕೆ ಮರುವರ್ಷ ಟೆಂಡರ್ ಕರೆದರು. ತೀರಾ ಅಲ್ಪಬೆಲೆಯಾದ್ದರಿಂದ ತಿರಸ್ಕರಿಸಲಾಯಿತು.
ಕೊನೆಗೆ 12 ರೂಪಾಯಿಗಳ ಚಪ್ಪಲಿಯನ್ನು 6 ರೂಪಾಯಿಗಳಂತೆ ನೌಕರರಿಗೇ ಮಾರಲು ನಿರ್ಧರಿಸಿದರು. ಅದರ ಫಲವೂ ಅಷ್ಟಕ್ಕಷ್ಟೇ. 4,805 ಚಪ್ಪಲಿಗಳು ಇನ್ನೂ ಕಾಲುಗಳಿಗಾಗಿ ಕಾಯುತ್ತಿವೆ! ಇದು 1971–72ರ ಆಡಿಟ್ ವರದಿ ಎತ್ತಿ ತೋರಿಸಿರುವ ಒಂದು ಪ್ರಕರಣ.