ಹರಿಯಾಣ ಡಿಐಜಿ ಕೊಲೆಗೆ ಹಿಂದಿ ಚಿತ್ರದ ಪ್ರೇರಣೆ

ಚಂಡೀಗಢ, ಜೂನ್ 9– ಅಪರಾಧಾತ್ಮಕ ಚಿತ್ರಗಳು ಕೊಲೆ ನಡೆಸಲು ಅಪ್ರಬುದ್ಧ ಮನಸ್ಸುಗಳನ್ನು ಪ್ರೇರೇಪಿಸಬಹುದೇ?

ಜೂನ್ ನಾಲ್ಕರಂದು ತಮ್ಮ ನಿವಾಸದಲ್ಲಿ ಮರಣಕ್ಕೀಡಾದ ಹರಿಯಾಣ ಜೈಲುಗಳ ಡಿ.ಐ.ಜಿ. ಈಶ್ವರಸಿಂಗ್ ಕದನ್ ಅವರ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಈ ಪ್ರಶ್ನೆಯನ್ನು ವಿಶ್ಲೇಷಿಸಿದರೆ ಇದು ಸತ್ಯವೇನೋ ಅನ್ನಿಸದಿರದು.

ಅವರ ಮನೆ ಸೇವಕ, ಹತ್ತೊಂಬತ್ತು ವರ್ಷದ ಲೀಲಾರಾಮ್ ಕುಚ್‌ನನ್ನು ಪ್ರಶ್ನಿಸಿದಾಗ ಹೊರಬಂದ ಸಂಗತಿಗಳಲ್ಲಿ ಈ ಅಂಶ ಸಾಬೀತಾಗಿದೆ. ಅಪರಾಧವನ್ನು ತೋರುವ ಹಿಂದಿ ಚಿತ್ರವೊಂದರಿಂದತನಗೆ ಈ ಕೊಲೆಗೆ ಪ್ರೇರಣೆ ದೊರೆಯಿತೆಂದು ಆತ ಒಪ್ಪಿಕೊಂಡಿದ್ದಾನೆ.

ಪರ್ವತಾರೋಹಿಗಳ ಕಣ್ಮರೆ:ತನಿಖಾ ಆಯೋಗ ನೇಮಕ

ನವದೆಹಲಿ, ಜೂನ್ 9– ಭಾರತ– ನ್ಯೂಜಿಲೆಂಡ್ ಮಹಿಳಾ ಪರ್ವತಾರೋಹಿಗಳ ತಂಡಕ್ಕೆ ಸೇರಿದ 4 ಮಂದಿ ಕಣ್ಮರೆಯಾಗಿರುವುದಕ್ಕೆ ಕಾರಣವಾದಂಥ ಸಂದರ್ಭಗಳ ಬಗ್ಗೆ ತನಿಖೆ ನಡೆಸಲು ಆಯೋಗವೊಂದನ್ನು ನೇಮಿಸಿರುವುದಾಗಿ ಭಾರತೀಯ ಪರ್ವತಾರೋಹಿ ಪ್ರತಿಷ್ಠಾನ ಇಂದು ಪ್ರಕಟಿಸಿದೆ.

ಈ ಪ್ರತಿಷ್ಠಾನದ ಮಾಜಿ ಅಧ್ಯಕ್ಷರೂ ಕೇಂದ್ರ ಸಚಿವ ಸಂಪುಟದ ಮಾಜಿ ಕಾರ್ಯದರ್ಶಿಯೂ ಆದ ಎಸ್.ಎಸ್. ಖೇರಾ ಅವರು ತನಿಖಾ ಆಯೋಗದ ಅಧ್ಯಕ್ಷರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.