ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ: ಬರುವ ವರ್ಷದ ಆದಿಯಲ್ಲಿ ಲೋಕಸಭೆಗೆ ಮಧ್ಯಂತರ ಚುನಾವಣೆ ಖಚಿತ

Published : 16 ಸೆಪ್ಟೆಂಬರ್ 2024, 0:26 IST
Last Updated : 16 ಸೆಪ್ಟೆಂಬರ್ 2024, 0:26 IST
ಫಾಲೋ ಮಾಡಿ
Comments

ಬರುವ ವರ್ಷದ ಆದಿಯಲ್ಲಿ ಲೋಕಸಭೆಗೆ ಮಧ್ಯಂತರ ಚುನಾವಣೆ ಖಚಿತ

ಹೈದರಾಬಾದ್, ಸೆ. 15– ಲೋಕಸಭೆಗೆ ಮುಂದಿನ ವರ್ಷಾರಂಭದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆಯನ್ನು ಜನಸಂಘದ ಅಧ್ಯಕ್ಷ ಎಲ್.ಕೆ. ಅಡ್ವಾಣಿ ಅವರು ಖಚಿತಪಡಿಸಿದ್ದಾರೆ.

‘ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಇಲ್ಲ’ ಎಂಬ ಕಾಂಗ್ರೆಸ್ ಅಧ್ಯಕ್ಷ ಎಸ್.ಡಿ. ಶರ್ಮಾ ಅವರ ಹೇಳಿಕೆಯನ್ನು ಅಡ್ವಾಣಿ ಪ್ರಸ್ತಾಪಿಸಿ, ‘1971ರ ಮಧ್ಯಂತರ ಚುನಾವಣೆಗೆ ಮುನ್ನವೂ ಅವರು ಹೀಗೆಯೇ ಹೇಳಿದ್ದರು. ಲೋಕಸಭೆ ವಿಸರ್ಜನೆಗೆ ಹಿಂದಿನ ದಿನವೂ ಕೇಂದ್ರ ಸಚಿವ ರಘುರಾಮಯ್ಯ ಅವರು ಚುನಾವಣೆ ಇಲ್ಲವೇ ಇಲ್ಲ ಎಂದಿದ್ದರು’ ಎಂದು ಸ್ಮರಿಸಿಕೊಂಡರು.

ಜೆ.ಪಿ. ಚಳವಳಿಗೆ ಬೆಂಬಲ: ಹುಬ್ಬಳ್ಳಿಯಲ್ಲಿ ಮೌನ ಮೆರವಣಿಗೆ

ಹುಬ್ಬಳ್ಳಿ, ಸೆ. 15– ಜೆ.ಪಿ. ಚಳವಳಿಗೆ ಬೆಂಬಲ ವ್ಯಕ್ತಪಡಿಸುವ ಭಿತ್ತಿಪತ್ರಗಳೊಂದಿಗೆ ಹುಬ್ಬಳ್ಳಿಯಲ್ಲಿ ಇಂದು ಮುಖ್ಯ ಬೀದಿಗಳಲ್ಲಿ ಮೌನ ಮೆರವಣಿಗೆ ನಂತರ ಬಹಿರಂಗ ಸಭೆ ನಡೆಯಿತು.

ನವ ನಿರ್ಮಾಣ ಸಮಿತಿಯವರು ಏರ್ಪಡಿಸಿದ್ದ ಮೆರವಣಿಗೆಯ ನೇತೃತ್ವವನ್ನು ಶಿವಪ್ಪ ಎಸ್. ಶೆಟ್ಟರ್, ಆರ್.ಎಸ್. ಕಾಪಸೆ, ಸಿ.ಜಿ. ನಿರಂಜನ್ (ಜನಸಂಘದ ನಾಯಕರು), ಎನ್.ಬಿ. ಪೂಜಾರ್, ಪ್ರೊ. ಎನ್.ಡಿ. ನಂಜುಂಡಸ್ವಾಮಿ, ಚಂದ್ರಶೇಖರ ಪಾಟೀಲ, ಸಿದ್ಧಲಿಂಗ ಪಟ್ಟಣಶೆಟ್ಟಿ, ಜಿ.ಎನ್. ರತನ್, ಚನ್ನಪ್ಪ ಭದ್ರಾಪುರ, ಎಲ್.ವಿ. ಹಿರೇಮಠ ಅವರು ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT