ಬೆಂಗಳೂರು, ಆ. 28– ಪೇಟೆಯಲ್ಲಿ ಮಾರಾಟವಾಗುತ್ತಿರುವ ಔಷಧಿಗಳಲ್ಲಿ ಶೇಕಡ 16ರಷ್ಟು ಕೀಳುದರ್ಜೆಯ ಔಷಧಿಗಳು ಸೇರಿವೆಯೆಂದು ಅಂದಾಜು ಮಾಡಲಾಗಿದೆ.
ಶ್ರೀ ಕೆ.ಆರ್.ಶ್ರೀನಿವಾಸಲು ನಾಯ್ಡು ಅವರ ಪ್ರಶ್ನೆಗೆ ಆರೋಗ್ಯ ಸಚಿವ ಶ್ರೀ ಎಚ್.ಸಿದ್ಧವೀರಪ್ಪ ಅವರು ಇಂದು ವಿಧಾನಸಭೆಯಲ್ಲಿ ಈ ಸಂಬಂಧ ಉತ್ತರ ನೀಡಿದರು.
ತಜ್ಞರು ವಿಶ್ಲೇಷಿಸಿದ ಔಷಧಿಗಳ ಪೈಕಿ 35 ಔಷಧಿಗಳು ಅಗತ್ಯ ಮಟ್ಟದಲ್ಲಿ ಇಲ್ಲದುದು ಕಂಡುಬಂದಿದೆ ಎಂದು ಸಚಿವರು ತಿಳಿಸಿದರು.
ವಾಣಿಜ್ಯ ಸಚಿವರಿಗೆ ಪ್ರಧಾನಿ ಛೀಮಾರಿ ವಿರುದ್ಧ ತೀವ್ರ ಪ್ರತಿಭಟನೆ
ನವದೆಹಲಿ, ಆ. 28– ಆಮದು ಲೈಸೆನ್ಸ್ ನೀಡಿಕೆಗೆ ಶಿಫಾರಸು ಮಾಡಿದರೆನ್ನಲಾದ ಸಂಸತ್ ಸದಸ್ಯರ ಹೆಸರನ್ನು ಸಭೆಗೆ ತಿಳಿಸಿದ ವಾಣಿಜ್ಯ ಮಂತ್ರಿ ಡಿ.ಪಿ.ಚಟ್ಟೋಪಾಧ್ಯಾಯ ಅವರನ್ನು ಪ್ರಧಾನಿ ಖಂಡಿಸಿದರೆಂಬ ವರದಿ ಬಗ್ಗೆ ರಾಜ್ಯಸಭೆಯ ವಿರೋಧ ಪಕ್ಷದ ಸದಸ್ಯರು ತೀವ್ರ ಆಕ್ಷೇಪವೆತ್ತಿದರು.