ಬೆಂಗಳೂರು, ಆ. 5– ದನದ ಕೊಟ್ಟಿಗೆಗೆ ಕೂಡಾ ಅಯೋಗ್ಯವಾದ ಸ್ಥಳ ಇದು. ಕಾರಣ ಇದೊಂದು ಹಾಳುಬಿದ್ದ ಮನೆ. ಆದರೆ ಈ ಮನೆಯಲ್ಲೇ ಸರ್ಕಾರದ ಕಾರುಬಾರು. ಪರಿಣಾಮ– ಸರ್ಕಾರಕ್ಕೆ ಈ ಮನೆ
ಯಿಂದಲೇ ವರ್ಷಕ್ಕೆ ಸುಮಾರು ಆರು ಕೋಟಿ ರೂಪಾಯಿ ತೆರಿಗೆ ರೂಪದಲ್ಲಿ
ಸಂದಾಯ.
ಸರ್ಕಾರದ ‘ಮೂಗು– ಬಾಯಿ’ ಆಗಿರುವ ಬೆಂಗಳೂರಿನ ಕನ್ನಿಂಗ್‌ಹ್ಯಾಂ ರಸ್ತೆ ಮತ್ತು ಜಯಮಹಲ್ ಬಡಾವಣೆಯ ಪ್ರಾದೇಶಿಕ ಸಾರಿಗೆ ಕಚೇರಿ ಕಟ್ಟಡಗಳ ಸ್ಥಿತಿ ಇದು.
ಈ ಕಟ್ಟಡಗಳು ಕನಿಷ್ಠಪಕ್ಷ 75 ವಸಂತ ಋತುಗಳನ್ನು ಕಂಡಿರಬಹುದು. ಆದರೆ ಇದುವರೆಗೆ ರಿಪೇರಿ ಅಷ್ಟೇ ಏಕೆ ಇವು ಬಿಳಿ ಸುಣ್ಣದ ಸ್ನಾನವನ್ನೂ ಕಂಡಿಲ್ಲ...
ಪ್ರವಾಹಪೀಡಿತರಿಗೆ ತುರ್ತು ಪರಿಹಾರಕ್ಕೆ ಆದ್ಯತೆ: ಸಚಿವ ಪೈ ಸಲಹೆ
ಮಂಗಳೂರು, ಆ. 5– ಪ್ರವಾಹಪೀಡಿತರಿಗೆ ಕೂಡಲೇ ಪರಿಹಾರ ನೀಡಿ, ನಾಶವಾದ ಮನೆಗಳ ಪುನರ್ ನಿರ್ಮಾಣಕ್ಕೆ ನಂತರ ಆದ್ಯತೆ ನೀಡಬೇಕೆಂದು ಕೇಂದ್ರ ಸಚಿವ
ಟಿ.ಎ. ಪೈ ಅವರು ಸಲಹೆ ಮಾಡಿದರು.