ಹುಲಿ ರಕ್ಷಣೆಗೆ ಬೃಹತ್ ಯೋಜನೆ
ಕಾರ್ಬಟ್ ಉದ್ಯಾನ, ನೈನಿತಾಲ್, ಏ.1– ವ್ಯಾಘ್ರ ಸಂತಾನ ನಶಿಸಿಹೋಗುವುದನ್ನು ತಡೆಗಟ್ಟುವ 6 ವರ್ಷ ಕಾಲಾವಧಿಯ 4 ಕೋಟಿ ರೂಪಾಯಿ ಯೋಜನೆ ಯನ್ನು ಕೇಂದ್ರ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಸಾರಿಗೆ ಖಾತೆ ಸಚಿವ ಡಾ. ಕರಣ್ ಸಿಂಗ್ ಅವರು ಇಂದು ಇಲ್ಲಿ ಉದ್ಘಾಟಿಸಿದರು.
‘ಈಗಿನ ಪರಿಸ್ಥಿತಿ ಮುಂದುವರಿದರೆ ವನ್ಯಮೃಗ ಜೀವನದ ವಿಶ್ವ ಸಂಕೇತವಾಗಿರುವ ಹುಲಿ, ನಮ್ಮ ಮಕ್ಕಳ ಪಾಲಿಗೆ ನೋಡಲೂ ಸಿಗದ ಹಾಗೆ ಆಗಿಹೋಗಬಹುದು’ ಎಂದು ಕರಣ್ ಸಿಂಗ್ ಕಳವಳ ವ್ಯಕ್ತಪಡಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.