‘ಯಾವುದೇ ಅನ್ಯಾಯಕನ್ನಡಿಗರು ಸಹಿಸರು’

ಬೆಂಗಳೂರು, ನ. 1– ಏನು ಅನ್ಯಾಯ ಮಾಡಿದರೂ ಕನ್ನಡಿಗರು ಸಹಿಸಿಕೊಳ್ಳುತ್ತಾರೆಂದು ಭಾವಿಸಬಾರದೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಕನ್ನಡ ರಾಜ್ಯೋತ್ಸವದಂದು ಕೇಂದ್ರ ಸರ್ಕಾರ ಹಾಗೂ ನೆರೆಯ ರಾಜ್ಯಗಳಿಗೆ ನಮ್ರ ಎಚ್ಚರಿಕೆಯನ್ನು ನೀಡಿದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವವರಿಗೆ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿಗಳನ್ನು ವಿತರಿಸಿದ ಅವರು, ‘ಕನ್ನಡಿಗರದು ಜಗಳವಾಡುವ ಸಂಪ್ರದಾಯವಲ್ಲ. ಆದರೆ, ಬೇರೆಯವರು ಜಗಳ ಆಡಬಯಸಿದರೆ ಏನು ಮಾಡಬೇಕೆಂಬುದು ನಮಗೆ ಗೊತ್ತು’ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಚುನಾವಣೆ ಚಿಹ್ನೆ: ವಾದ ಮುಕ್ತಾಯ

ನವದೆಹಲಿ, ನ. 1 (ಯುಎನ್ಐ)– ಕಾಂಗ್ರೆಸ್ ಚುನಾವಣೆ ಚಿಹ್ನೆಗೆ ಸಂಬಂಧಿಸಿದ ವಿವಾದದಲ್ಲಿ ವಿಚಾರಣೆ ನಡೆಸಿದ ಭಾರತದ ಪ್ರಧಾನ ಚುನಾವಣಾ ಕಮಿಷನರ್
ಎಸ್.ಪಿ.ಸೇನ್ ವರ್ಮಾ ಅವರು ಡಿಸೆಂಬರ್ ಕೊನೆಯ ಹೊತ್ತಿಗೆ ತಮ್ಮ ತೀರ್ಪನ್ನು ಪ್ರಕಟಿಸುವ ನಿರೀಕ್ಷೆಯಿದೆ.

ಸಂಸ್ಥಾ ಕಾಂಗ್ರೆಸ್ ಪರ ವಕೀಲರು ಮಂಡಿಸಿದ ವಾದಗಳಿಗೆ ಆಡಳಿತ ಕಾಂಗ್ರೆಸ್ನ ವಕೀಲರಾದ ಕೆ.ಎಸ್.ಮಿಶ್ರಾ ಅವರು ಇಂದು ಉತ್ತರ ನೀಡಿದ ನಂತರ ವಿಚಾರಣೆ ಮುಗಿಸಿರುವುದಾಗಿ ಸೇನ್ ವರ್ಮಾ ಘೋಷಿಸಿ, ತೀರ್ಪನ್ನು
ಕಾದಿರಿಸಿರುವುದಾಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.