ಮಂಗಳವಾರ, ಜೂನ್ 28, 2022
26 °C

50 ವರ್ಷಗಳ ಹಿಂದೆ: ಬುಧವಾರ 2-6-1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಹಾರ: ಕರ್ಪೂರಿ ಠಾಕೂರ್ ಸಂಪುಟದ ಅಧಿಕಾರ ತ್ಯಾಗ

ಪಟ್ನಾ, ಜೂನ್ 1– ಬಿಹಾರದಲ್ಲಿ 163 ದಿನಗಳಿಂದ ಅಧಿಕಾರದಲ್ಲಿದ್ದ ಎಸ್‌.ಎಸ್.ಪಿ. ನಾಯಕತ್ವದ
ಸಂಯುಕ್ತ ವಿಧಾಯಕ ದಳದ ಕರ್ಪೂರಿ ಠಾಕೂರ್ ನೇತೃತ್ವದ ಸಂಪುಟವು ಹೆಚ್ಚುಹೆಚ್ಚು ಪಕ್ಷಾಂತರಗಳ ಪರಿಣಾಮವಾಗಿ ಇಂದು ಬೆಳಿಗ್ಗೆ ನಿರ್ಗಮಿಸಿತು.

ಶ್ರೀ ಭೋಲಾ ಪಾಸ್ವಾನ್ ಶಾಸ್ತ್ರಿ ಅವರ ನಾಯಕತ್ವದಲ್ಲಿ ಪ್ರಗತಿಶೀಲ ವಿಧಾಯಕ ದಳದ ಹೊಸ ಸಂಪುಟವೊಂದು ನಾಳೆ ಬೆಳಿಗ್ಗೆ ಪ್ರಮಾಣವಚನ ಸ್ವೀಕರಿಸುತ್ತದೆ. ಹೊಸ ಮಂತ್ರಿಮಂಡಲದಲ್ಲಿ ಆಡಳಿತ ಕಾಂಗ್ರೆಸ್, ಸಿಪಿಐ, ಪಿಎಸ್‌ಪಿ ಮತ್ತು ಪಕ್ಷೇತರರು ಇರುವ ನಿರೀಕ್ಷೆ ಇದೆ.

ಪಿಯುಸಿಯಲ್ಲಿ ವೃತ್ತಿಶಿಕ್ಷಣ ತರಗತಿ ಉದ್ದೇಶ

ಬೆಂಗಳೂರು, ಜೂನ್ 1– ರಾಜ್ಯದಲ್ಲಿ ಈ ವರ್ಷದಿಂದ ಆರಂಭವಾಗಲಿರುವ ಎರಡು ವರ್ಷಗಳ ಪಿಯುಸಿ ಶಿಕ್ಷಣದಲ್ಲಿ ಕೆಲವೊಂದು ವೃತ್ತಿಶಿಕ್ಷಣ ತರಗತಿಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು