‘ಗರೀಬಿ ಬಢಾವೋ’

ನವದೆಹಲಿ, ಜೂನ್ 8–ಜನಸಂಘವು ಭಾನುವಾರದಿಂದ ರಾಷ್ಟ್ರದಾದ್ಯಂತ ಹೂಡಿರುವ ‘ಶ್ರೀಸಾಮಾನ್ಯನಿಗೆ ತೆರಿಗೆಗಳು ಬೇಡ’ ಚಳವಳಿ ಅಂಗವಾಗಿ ಬಿಡುಗಡೆ ಮಾಡಿರುವ ಒಂದು ಪ್ರಕಟಣೆಯಲ್ಲಿ ಕೇಂದ್ರ ಬಜೆಟನ್ನು ‘ಗರೀಬಿ ಬಢಾವೋ’ (ದಾರಿದ್ರ್ಯ ವೃದ್ಧಿ) ಎಂದು ವರ್ಣಿಸಿದೆ.

ಸುಪ್ರಸಿದ್ಧ ಅರ್ಥಶಾಸ್ತ್ರಜ್ಞ ಪ್ರೊ.ಸುಬ್ರಹ್ಮಣ್ಯಂ ಸ್ವಾಮಿ ಮತ್ತು ಸಂಸತ್ ಸದಸ್ಯ ಡಾ.ಭಾಯಿ ಮಹಾವೀರ್ ಅವರು ಬಜೆಟನ್ನು ವಿಮರ್ಶಿಸಿರುವ ಲೇಖನಗಳನ್ನುಳ್ಳ ಅಪ್ರಕಟಣೆಯ ಶೀರ್ಷಿಕೆ ‘ಗರೀಬಿ ಬಢಾವೋ’.

ಕಾಮನ್‌ವೆಲ್ತ್ ತ್ಯಜಿಸುವುದಾಗಿ ಬ್ರಿಟನ್‌ಗೆ ಭಾರತದ ಎಚ್ಚರಿಕೆ

ನವದೆಹಲಿ, ಜೂನ್ 8– ತಾನು ಆಮದು ಮಾಡಿಕೊಳ್ಳುವ ಹತ್ತಿ ಬಟ್ಟೆ ಮೇಲೆ ಶೇ 15ರಷ್ಟು ಸುಂಕ ವಿಧಿಸುವುದಾಗಿ ಬ್ರಿಟನ್ ಹಟ ಹಿಡಿದರೆ ತಾನು ಕಾಮನ್‌ವೆಲ್ತ್ ತ್ಯಜಿಸಬೇಕಾಗುವುದು ಎಂದು ಭಾರತವು ಅದಕ್ಕೆ ಖಚಿತವಾಗಿ ತಿಳಿಸಿದೆ.

ಬ್ರಿಟನ್ ಈ ನಿರ್ಧಾರವನ್ನು ಬದಲಾಯಿಸಬೇಕೆಂದು ವಾಣಿಜ್ಯ ಸಚಿವ ಎಲ್.ಎನ್.ಮಿಶ್ರಾ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.