ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ: ವಾರಾಹಿ ಯೋಜನೆ ಜಾರಿಗೆ ನಿರ್ಧಾರ

Published 12 ಜೂನ್ 2024, 0:07 IST
Last Updated 12 ಜೂನ್ 2024, 0:07 IST
ಅಕ್ಷರ ಗಾತ್ರ

ವಾರಾಹಿ ಯೋಜನೆ ಜಾರಿಗೆ ನಿರ್ಧಾರ

ಬೆಂಗಳೂರು, ಜೂನ್‌ 11– ವಿದ್ಯುಚ್ಛಕ್ತಿ ಮತ್ತು ನೀರಾವರಿ ಎರಡೂ ಉದ್ದೇಶಗಳಿಗಾಗಿ ಉತ್ತರ ಕನ್ನಡ ಜಿಲ್ಲೆಯ ವಾರಾಹಿ ಯೋಜನೆಯನ್ನು ಕಾರ್ಯಗತ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ನಿನ್ನೆ ಮಂತ್ರಿಮಂಡಲ ಕೈಗೊಂಡ ನಿರ್ಧಾರದಂತೆ ವಾರಾಹಿ ನದಿ ನೀರನ್ನು ನೀರಾವರಿಗಾಗಿ ತುಂಗಭದ್ರಾ ನದಿಗೆ ತಿರುಗಿಸುವ ಆಲೋಚನೆಯನ್ನು ಕೈಬಿಡಲಾಯಿತು.

ಈಗಿನ ಅಂದಾಜಿನಂತೆ ವಾರಾಹಿ ಯೋಜನೆ ವೆಚ್ಚ 65 ಕೋಟಿ ರೂ. 230 ಮೆಗಾ ವಾಟ್ ವಿದ್ಯುತ್‌ಚ್ಛಕ್ತಿ ಉತ್ಪನ್ನವಾಗಿ ಕುಂದಾಪುರ ಮತ್ತು ಉಡುಪಿ ತಾಲ್ಲೂಕುಗಳಲ್ಲಿ 60 ಸಾವಿರ ಎಕರೆಯಲ್ಲಿ ನೀರಾವರಿಯಾಗುವುದು.

ರೈಲ್ವೆ ನೌಕರರ ಸಮಸ್ಯೆ: ಸಮನ್ವಯ ಸಮಿತಿ ಜೊತೆ ಮತ್ತೆ ಚರ್ಚೆಗೆ ಕೇಂದ್ರದ ನಕಾರ

ನವದೆಹಲಿ, ಜೂನ್‌ 11– ರೈಲ್ವೆ ನೌಕರರ ಸಮಸ್ಯೆಗಳ ಬಗ್ಗೆ ಸರ್ಕಾರ ಹಾಗೂ ರಾಷ್ಟ್ರೀಯ ಸಮನ್ವಯ ಸಮಿತಿ ಜತೆ ಮತ್ತೆ ಯಾವುದೇ ಮಾತುಕತೆ ನಡೆಯುವುದನ್ನು ರೈಲ್ವೆ ಖಾತೆ ವೃತ್ತಗಳು ಇಂದು ತಳ್ಳಿಹಾಕಿದವು.

ಇನ್ನೂ ಇತ್ಯರ್ಥವಾಗದಿರುವ ರೈಲ್ವೆ ನೌಕರರ ಬೇಡಿಕೆಗಳನ್ನು ಕುರಿತು ರೈಲ್ವೆ ನೌಕರರ ಬೇಡಿಕೆಗಳನ್ನು ಕುರಿತು ರೈಲ್ವೆ ಸಚಿವರ ಜತೆ ಚರ್ಚಿಸುವುದಕ್ಕೆ ರೈಲ್ವೆ ನೌಕರರ ಹೋರಾಟ ಕುರಿತ ರಾಷ್ಟ್ರೀಯ ಸಮನ್ವಯ ಸಮಿತಿ ಸಂಚಾಲಕ ಜಾರ್ಜ್‌ ಫರ್ನಾಂಡಿಸ್‌ ಅವರು ಪ್ರಯತ್ನಿಸಿದ್ದಾರೆ ಎಂಬ ವರದಿಗೆ ರೈಲ್ವೆ ವೃತ್ತಗಳ ಪ್ರತಿಕ್ರಿಯೆ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT