ಬಂಗಾಳ: ಯಾವುದೇ ಪಕ್ಷಕ್ಕೂ ನಿಚ್ಚಳ ಬಹುಮತ ಅಸಂಭವ ಕೋಲ್ಕತ್ತ, ಮಾರ್ಚ್ 13– ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಆಡಳಿತ ಕಾಂಗ್ರೆಸಿಗಾಗಲೀ, ಮಾರ್ಕ್ಸ್ವಾದಿ ಕಮ್ಯುನಿಸ್ಟ್ ನೇತೃತ್ವದ ಸಂಯುಕ್ತ ರಂಗಕ್ಕಾಗಲೀ ನಿಚ್ಚಳ ಬಹುಮತ ದೊರೆಯುವ ಸಂಭವ ದೂರವಾಗುತ್ತಾ ಬಂದಿದೆ. ಈ ಎರಡು ಪ್ರಮುಖ ಪಕ್ಷಗಳೂ ಸಮಸಮ ಸೆಣಸಿನಿಂದ ಸ್ಥಾನಗಳನ್ನು ಗಳಿಸುತ್ತಿವೆ.
ಸಂಜೆಯ ವೇಳಗೆ 188 ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಮಾರ್ಕ್ಸ್ ವಾದಿ ಸಂಯುಕ್ತ ರಂಗ 79 ಸ್ಥಾನಗಳನ್ನು, ಮಾರ್ಕ್ಸ್ವಾದಿ ಕಮ್ಯುನಿಸ್ಟ್ 70 ಸ್ಥಾನ ಗಳಿಸಿದ್ದರೆ, ಆಡಳಿತ ಕಾಂಗ್ರೆಸ್ 77 ಸ್ಥಾನಗಳನ್ನು ಭದ್ರಪಡಿಸಿಕೊಂಡಿದೆ.