ಮಂಗಳವಾರ, ಜೂನ್ 15, 2021
26 °C

50 ವರ್ಷಗಳ ಹಿಂದೆ: ಬುಧವಾರ, 12-5-1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಾಧ್ಯವಾದಷ್ಟು ಶೀಘ್ರ ಸಮಾಜವಾದಿ ಸಮಾಜ ನಿರ್ಮಾಣವೇ ಗುರಿ’
ಬೆಂಗಳೂರು, ಮೇ 11–
ಸಾಧ್ಯವಾದಷ್ಟೂ ಶೀಘ್ರ ಕಾಲದಲ್ಲಿ ಸಮಾಜವಾದಿ ಸಮಾಜ ನಿರ್ಮಾಣವೇ ಸಂಸ್ಥಾ ಕಾಂಗ್ರೆಸ್ಸಿನ ಗುರಿ ಎಂದು ಎಂಪಿಸಿಸಿ ಅಧ್ಯಕ್ಷ ಶ್ರೀ ವೀರೇಂದ್ರ ಪಾಟೀಲ್‌ ಅವರು ಇಂದು ಇಲ್ಲಿ ತಿಳಿಸಿದರು.

ಒಂದೇ ಗುರಿಯಿರುವ ಎರಡು ಪಕ್ಷಗಳಿರುವ ಪ್ರಶ್ನೆಯಲ್ಲವೆಂದೂ ಕಾರ್ಯಕ್ರಮವನ್ನು ಹೇಗೆ, ಯಾವ ವಿಧಾನ ಅನುಸರಿಸಿ ಗುರಿ ಸಾಧಿಸಲಾಗುವುದು ಎಂಬುದು ಮುಖ್ಯವೆಂದೂ ಶ್ರೀಯುತರು ತಿಳಿಸಿದರು. ಎರಡೂ ಕಾಂಗ್ರೆಸ್ಸುಗಳ ಧ್ಯೇಯ ಹಾಗೂ ಕಾರ್ಯಕ್ರಮ ಒಂದೇ ಆಗಿರುವಾಗ ಮುಂದಿನ ಚುನಾವಣೆಯಲ್ಲಿ ಜನತೆಯ ಮುಂದೆ ಹೊಸದೇನನ್ನು ಇಡುವಿರಿ ಎಂಬ ಪ್ರಶ್ನೆಗೆ ಹೀಗೆ ಉತ್ತರವಿತ್ತರು.

ಗುಜರಾತ್‌ ವಿಧಾನಸಭೆ ವಿಸರ್ಜಿಸಲು ರಾಜ್ಯಪಾಲರ ತಿರಸ್ಕಾರ
ಅಹಮದಾಬಾದ್‌, ಮೇ 11–
ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿ, ಶೀಘ್ರ ಚುನಾವಣೆ ನಡೆಸಲು ಆಜ್ಞೆ ಮಾಡಬೇಕೆಂದು ಮುಖ್ಯಮಂತ್ರಿ ಹಿತೇಂದ್ರ ದೇಸಾಯಿಯವರು ಮಾಡಿದ ಶಿಫಾರಸನ್ನು ಗುಜರಾತಿನ ರಾಜ್ಯಪಾಲ ಶ್ರೀಮನ್‌ ನಾರಾಯಣ ಅವರು ತಿರಸ್ಕರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು