ಶನಿವಾರ, ಜುಲೈ 2, 2022
25 °C

50 ವರ್ಷಗಳ ಹಿಂದೆ: ಸೋಮವಾರ, ಡಿಸೆಂಬರ್ 20, 1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದು ಯಹ್ಯಾಖಾನ್‌ ರಾಜೀನಾಮೆ

ನವದೆಹಲಿ, ಡಿ. 19– ಪಾಕಿಸ್ತಾನದ ಅಧ್ಯಕ್ಷ ಯಹ್ಯಾಖಾನರು ಸೋಮವಾರ ರಾಜೀನಾಮೆ ನೀಡುತ್ತಾರೆಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.

ಚುನಾಯಿತ ಜನತಾ ಪ್ರತಿನಿಧಿಗಳಿಗೆ ಅಧಿಕಾರ ವರ್ಗಾಯಿಸಿದ ಕೂಡಲೇ ಅವರು ಪದವಿ ತ್ಯಜಿಸುವರೆಂದು ಅಧಿಕೃತ ವಕ್ತಾರ ಹೇಳಿರುವುದಾಗಿ ಪಾಕ್‌ ರೇಡಿಯೊ ಇಂದು ರಾತ್ರಿ ಬಿತ್ತರಿಸಿತು.

ಯಹ್ಯಾಖಾನ್‌ ಮತ್ತಿತರ ಮಿಲಿಟರಿ ಆಡಳಿತ ಅಧಿಕಾರಿಗಳನ್ನು ಸಾರ್ವಜನಿಕ ವಿಚಾರಣೆಗೆ ಗುರಿಪಡಿಸಬೇಕೆಂದು ವಿಮಾನ್‌ ಪಡೆಯ ಮಾಜಿ ದಂಡನಾಯಕ ಏರ್‌ ಮಾರ್ಷಲ್‌ ಅಸ್ಘರ್‌ ಖಾನ್‌ ಒತ್ತಾಯ ಮಾಡಿದ ನಂತರ ರೇಡಿಯೊ ಉರ್ದು ವಾರ್ತಾ ಪ್ರಸಾರವೊಂದರಲ್ಲಿ ಅಧ್ಯಕ್ಷರು ರಾಜೀನಾಮೆ ಕೊಡುವ ಸುದ್ದಿ ರಾವಲ್ಪಿಂಡಿಯಿಂದ ಬಂದಿದೆಯೆಂದು ತಿಳಿಸಿತು. ಯಹ್ಯಾಖಾನರ ಪದಚ್ಯುತಿಗೆ ಒತ್ತಾಯ ಮಾಡಿ ನಿನ್ನೆ ಪಾಕಿಸ್ತಾನದ ನಾನಾಕಡೆ ಮತಪ್ರದರ್ಶನಗಳು ನಡೆದಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು