ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 20–8–1968

Last Updated 19 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಮುರಾರಜಿಗೆ ಪ್ರಧಾನಿ ರಕ್ಷಾಕವಚ: ಲಿಮಯೆ ಸೂಚನೆಗೆ ಲೋಕಸಭೆ ತಿರಸ್ಕಾರ

ನವದೆಹಲಿ, ಆ. 19– ತಮ್ಮ ಪುತ್ರನ ವ್ಯಾಪಾರ ವಹಿವಾಟಿನ ಬಗೆಗೆ ಉಪಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ಸಭೆಗೆ ತಪ್ಪು ಹೇಳಿಕೆ ಕೊಟ್ಟುದಕ್ಕೆ ಅಸಮ್ಮತಿ ವ್ಯಕ್ತಪಡಿಸುವ ಸೂಚನೆಗೆ ಇಂದು ಲೋಕಸಭೆಯಲ್ಲಿ ಸುಲಭವಾಗಿ ಭಾರಿ ಬಹುಮತದಿಂದ ಪರಾಜಿತವಾಯಿತು.

ಮುರಾರಜಿ ರಾಜೀನಾಮೆಗೆ ಲಿಮಯೆ ಒತ್ತಾಯ

ನವದೆಹಲಿ, ಆ. 19– ತಮ್ಮ ಪುತ್ರ ಶ್ರೀ ಕಾಂತಿ ದೇಸಾಯಿ ಅವರ ವ್ಯವಹಾರದ ಸಂಬಂಧದಲ್ಲಿ ‘ಸುಳ್ಳು’ ಹೇಳಿಕೆ ಕೊಟ್ಟಿರುವುದರ ಕಾರಣ ಉಪಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ರಾಜೀನಾಮೆ ಕೊಡಬೇಕೆಂದು ಸಂಯುಕ್ತ ಸೋಷಲಿಸ್ಟ್‌ ಪಕ್ಷದ ನಾಯಕ ಶ್ರೀ ಮಧು ಲಿಮಯೆ ಅವರು ಇಂದು ಲೋಕಸಭೆಯಲ್ಲಿ ಒತ್ತಾಯಿಸಿದರು.

ಸದ್ಯ ಮಕ್ಕಳಿಲ್ಲವಲ್ಲ!

ನವದೆಹಲಿ, ಆ. 19–‘ಭ್ರಷ್ಟಾಚಾರ ತಾಂಡವವಾಡುತ್ತಿರುವ ಈ ಕಾಲದಲ್ಲಿ ಸದ್ಯ ನನಗೆ ಮಕ್ಕಳಿಲ್ಲವಲ್ಲ, ಅದೇ ಬಹು ಸಂತೋಷ’ ಎಂದು ಆಚಾರ್ಯ ಕೃಪಲಾನಿ ಇಂದು ಲೋಕಸಭೆಯಲ್ಲಿ ನುಡಿದಾಗ ಸದಸ್ಯರು ಮನಸಾರ ನಕ್ಕರು.

ರಾಜ್ಯದ ಕರಡು ಯೋಜನೆ ಬಗ್ಗೆ ಉನ್ನತಮಟ್ಟದ ಚರ್ಚೆ

ಬೆಂಗಳೂರು, ಆ. 19– ರಾಜ್ಯದ ಯೋಜನಾ ಮಂಡಳಿ ರೂಪಿಸಿರುವ ರಾಜ್ಯದ ನಾಲ್ಕನೇ ಪಂಚವಾರ್ಷಿಕ ಯೋಜನೆಯ ಕರಡನ್ನು ಕುರಿತು ಸೆಪ್ಟೆಂಬರ್‌ 4 ಮತ್ತು 5ರಂದು ಯೋಜನಾ ಆಯೋಗ ಹಾಗೂ ರಾಜ್ಯದ ಪ್ರತಿನಿಧಿಗಳ ನಡುವೆ ಉನ್ನತಮಟ್ಟದ ಚರ್ಚೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT