ಒಂದೂವರೆ ವರ್ಷದ ಹಿಂದೆ ನುಂಗಿದ್ದ ಚಿನ್ನದ ಬಳೆ ಕಕ್ಕಿ ಸತ್ತ!
ADVERTISEMENT
ADVERTISEMENT
ಬೆಂಗಳೂರು, ಜೂನ್ 21– ಒಂದೂವರೆ ವರ್ಷದ ಹಿಂದೆ ನುಂಗಿದ್ದ ಚಿನ್ನದ ಬಳೆಯನ್ನು ಸಾಯುವ ಮುನ್ನ ವಾಂತಿ ಮಾಡಿದ ಪ್ರಸಂಗವೊಂದು ವರದಿಯಾಗಿದೆ. ಬೆಂಗಳೂರು ಸೆಂಟ್ರಲ್ ಜೈಲಿನ ಖೈದಿ ಚಿಕ್ಕಪಟಾಲಿಗ ಎಂಬುವನು ಎದೆ ನೋವಿನಿಂದ ನಿನ್ನೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣ ಹೊಂದಿದನು.
ಸಾಯುವ ಮುನ್ನ ವಾಂತಿ ಮಾಡಿ ಸುಮಾರು ಒಂದೂವರೆ ಸವರನ್ ತೂಕದ ಚಿನ್ನದ ಬಳೆಯೊಂದನ್ನು ಕಕ್ಕಿದ. ಆ ಬಳೆಯನ್ನು ಒಂದೂವರೆ ವರ್ಷದ ಕೆಳಗೆ ನುಂಗಿದ್ದನಂತೆ.