ಬೆಂಗಳೂರು, ಅ. 17– ಆಸ್ತಿಗಳಿಗಾಗಿ ನಡೆಯುತ್ತಿರುವ ವ್ಯಾಜ್ಯಗಳನ್ನು ಕಡಿಮೆ ಮಾಡುವ ದೃಷ್ಟಿಯಿಂದ ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ‘ಮರು ಮೋಜಣಿ’ (ಸರ್ವೆ) ನಡೆಸುವ ಬೃಹತ್ ಯೋಜನೆಯನ್ನು ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಜಾರಿಗೊಳಿಸಲು ರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡಿದೆ.

ಮುಂದಿನ 10 ವರ್ಷಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದ್ದು, ಪ್ರಾರಂಭದಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕನ್ನು ಇದಕ್ಕಾಗಿ ಆರಿಸಿ
ಕೊಳ್ಳಲಾಗಿದೆ. ಅತ್ಯಾಧುನಿಕ ಗ್ಲೋಬಲ್ ಪೊಸಿಷನಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಂಡು ಈ ಕೆಲಸ ಮಾಡಲಾಗುತ್ತದೆ.

ಸಹಸ್ರಮಾನದ ಮೊದಲ ತೀರ್ಥೋದ್ಭವ

ತಲಕಾವೇರಿ (ಕೊಡಗು), ಅ. 17– ಬ್ರಹ್ಮಗಿರಿ ತಪ್ಪಲಿನ ತಲಕಾವೇರಿಯಲ್ಲಿ ಜಮಾಯಿಸಿದ್ದ ಸಹಸ್ರಾರು ಸಂಖ್ಯೆಯ ಯಾತ್ರಾರ್ಥಿಗಳ ಸಮ್ಮುಖದಲ್ಲಿ ಇಂದು ಮಧ್ಯಾಹ್ನ 12.31ರ ತುಲಾ ಸಂಕ್ರಮಣ ಮುಹೂರ್ತದಲ್ಲಿ ಕಾವೇರಿ ತೀರ್ಥ ಆವಿರ್ಭವಿಸಿತು.

ಜೀವನದಿ ಕಾವೇರಿಯ ಉಗಮಸ್ಥಾನದಿಂದ ತಲಕಾವೇರಿಗೆ ಹೊಂದಿಕೊಂಡ ಕೊಳದ ಬಳಿ
ತೀರ್ಥ ಉದ್ಭವಕ್ಕೆ ಅರ್ಧ ಗಂಟೆಗೆ ಮುನ್ನವೇ ಪೊಲೀಸ್ ಬಿಗಿ ಪಹರೆಯನ್ನು ಭೇದಿಸಿ ಭಕ್ತ ಸಮೂಹವೂ ಕಾದು ನಿಂತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.