ಏಕೀಕರಣದ ಹರಿಕಾರ ಮುತ್ಸದ್ದಿ ಎಸ್ಸೆನ್ ಇನ್ನಿಲ್ಲ

ಚಿತ್ರದುರ್ಗ, ಆಗಸ್ಟ್ 8– ಕರ್ನಾಟಕ ಏಕೀಕರಣದ ಹರಿಕಾರ ಎಂದೇ ಹೆಸರಾದ ಹಿರಿಯ ಮುತ್ಸದ್ದಿ,
ಅಪ್ಪಟ ಗಾಂಧೀವಾದಿ, ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಇನ್ನಿಲ್ಲ.

ಚಿತ್ರದುರ್ಗದ ತಮ್ಮ ಮನೆ ‘ವಿನಯ’ದಲ್ಲಿ ಕೆಲವು ದಿನಗಳಿಂದ ಸಾವು ಬದುಕಿನೊಂದಿಗೆ ಹೋರಾಟ ನಡೆಸಿದ್ದ ಈ ಹಿರಿಯ ಜೀವ, ಮಂಗಳವಾರ ರಾತ್ರಿ 10.30ರ ಹೊತ್ತಿಗೆ ಕೊನೆಯುಸಿರು ಎಳೆದರು.

ಹೃದಯಾಘಾತದಿಂದ ತತ್ತರಿಸಿದ ಅವರನ್ನು ಉಳಿಸಿಕೊಳ್ಳಲು ವೈದ್ಯರು ದೊಡ್ಡ ಹೋರಾಟವನ್ನೇ ನಡೆಸಿದರಾದರೂ ಅದು ಪ್ರಯೋಜನಕ್ಕೆ ಬರಲಿಲ್ಲ.

ಹಿಜ್ಬುಲ್ ಕದನ ವಿರಾಮ ವಾಪಸ್

ಇಸ್ಲಾಮಾಬಾದ್, ಆಗಸ್ಟ್ 8 (ಪಿಟಿಐ)– ಜಮ್ಮು ಮತ್ತು ಕಾಶ್ಮೀರದಲ್ಲಿ ಹಠಾತ್ತಾಗಿ ಘೋಷಿಸಿದ್ದ ಕದನ ವಿರಾಮವನ್ನು ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆ ಇಂದು ಸಂಜೆ ವಾಪಸು ಪಡೆಯಿತು.

ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ಪಾಕಿಸ್ತಾನವನ್ನೂ ಸೇರಿಸಿಕೊಂಡು ತ್ರಿಪಕ್ಷೀಯ ಮಾತುಕತೆಗೆ ಬರುವಂತೆ ನೀಡಿದ್ದ ಕರೆಗೆ, ‘ಭಾರತ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ’ ಎಂದು ಅದು ದೂಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.