ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ನಚಿಕೇತಗೆ ತಾಯ್ನಾಡಿನಲ್ಲಿ ಹೃದಯಸ್ಪರ್ಶಿ ಸ್ವಾಗತ

Published 4 ಜೂನ್ 2024, 23:59 IST
Last Updated 4 ಜೂನ್ 2024, 23:59 IST
ಅಕ್ಷರ ಗಾತ್ರ

ನವದೆಹಲಿ, ಜೂನ್ 4: ಅದೊಂದು ಹೃದಯಸ್ಪರ್ಶಿ ಸಂದರ್ಭ. ಪಾಕಿಸ್ತಾನದ ಬಂಧನದಲ್ಲಿ ಎಂಟು ದಿನಗಳನ್ನು ಕಳೆದ ನಂತರ ಇಂದು ಇಲ್ಲಿನ ಪಾಲಂ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಭಾರತದ ಸುಪುತ್ರ ಫ್ಲೈಟ್ ಲೆಫ್ಟಿನೆಂಟ್ ನಚಿಕೇತ ಅವರನ್ನು ಅವರ ತಾಯಿ–ತಂದೆ, ಕುಟುಂಬದ ಸದಸ್ಯರು ಭಾವೋದ್ವೇಗದಿಂದ ಅಪ್ಪಿಕೊಂಡಾಗ ಸುತ್ತಲಿದ್ದವರ ಕಣ್ಣುಗಳು ಒದ್ದೆಯಾದವು.

ಪಾಕಿಸ್ತಾನದ ಬಂಧನದಿಂದ ಗುರುವಾರ ರಾತ್ರಿ ಬಿಡುಗಡೆಯಾದ 26 ವರ್ಷದ ನಚಿಕೇತ ಅವರು ವಿಶೇಷ ವಿಮಾನದಲ್ಲಿ ಅಮೃತಸರದಿಂದ ಇಲ್ಲಿಗೆ ಬಂದಿಳಿದಾಗ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್, ಏರ್ ಚೀಫ್ ಮಾರ್ಷಲ್ ಎ.ವೈ. ಟಿಪ್ನಿಸ್ ಹಾಗೂ ಇತರ ಹಿರಿಯ ಅಧಿಕಾರಿಗಳು ಬರಮಾಡಿಕೊಂಡರು.

ಮಗನಿಗಾಗಿ ವಿಮಾನ ನಿಲ್ದಾಣದಲ್ಲಿ ಕಾದಿದ್ದ ನಚಿಕೇತ ಅವರ ತಾಯಿ ಲಕ್ಷ್ಮಿ ಹಾಗೂ ತಂದೆ ಕೆ.ಆರ್‌.ಕೆ. ಶಾಸ್ತ್ರಿ ಅವರು ಉಕ್ಕಿ ಬಂದ ಉದ್ವೇಗವನ್ನು ತಡೆಯಲಾಗದೆ ಮಗನನ್ನು ಅಪ್ಪಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT