ಶನಿವಾರ, ನವೆಂಬರ್ 26, 2022
23 °C

25 ವರ್ಷಗಳ ಹಿಂದೆ: ಭಾನುವಾರ, 21–09–1997

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಯಾವತಿ ರಾಜೀನಾಮೆ: ಇಂದು ಹೊಸ ಸರ್ಕಾರ

ಲಖನೌ, ಸೆ. 20 (ಪಿಟಿಐ, ಯುಎನ್‌ಐ)– ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಅವರು ಇಂದು ರಾತ್ರಿ ತಮ್ಮ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ರಾಜ್ಯಪಾಲ ರೋಮೇಶ್‌ ಭಂಡಾರಿ ಅವರು ಅಂಗೀಕರಿಸಿದ್ದು ಹೊಸ ಸರ್ಕಾರ ರಚಿಸಲು ಬಿಜೆಪಿ ನಾಯಕ ಕಲ್ಯಾಣ್‌ ಸಿಂಗ್‌ ಅವರಿಗೆ ಆಹ್ವಾನ ನೀಡಿದ್ದಾರೆ. 

ಇದಕ್ಕೂ ಮೊದಲು ಬಿಎಸ್‌ಪಿ ಮುಖ್ಯಸ್ಥ ಕಾನ್ಷಿರಾಂ ಅವರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿದ ಮಾಯಾವತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಲ್ಲದೆ ಕಲ್ಯಾಣ್‌ಸಿಂಗ್‌ ಸರ್ಕಾರಕ್ಕೆ ಬೆಂಬಲ ನೀಡುವ ಪತ್ರವನ್ನು ಸಲ್ಲಿಸಿದ್ದರು. 

ನ್ಯೂಯಾರ್ಕ್‌: ನಾಳೆ ಕ್ಲಿಂಟನ್‌ ಗುಜ್ರಾಲ್‌ ಮಾತುಕತೆ

ನ್ಯೂಯಾರ್ಕ್‌, ಸೆ. 20 (ಪಿಟಿಐ)– ಪ್ರಧಾನಿ ಐ.ಕೆ. ಗುಜ್ರಾಲ್‌ ಅವರು ಇಂದು ರಾತ್ರಿ ಇಲ್ಲಿಗೆ ಆಗಮಿಸಿದ್ದು ಸೋಮವಾರ ಅಮೆರಿಕ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಅವರೊಂದಿಗೆ ಮಾತುಕತೆ ನಡೆಸುವರು. 

ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಅಮೆರಿಕಕ್ಕೆ ಆಗಮಿಸುತ್ತಿರುವ ಗುಜ್ರಾಲ್‌ ಅವರು ನ್ಯೂಯಾರ್ಕ್‌ನಲ್ಲಿ ಪಾಕ್‌ ಪ್ರಧಾನಿ ನವಾಜ್‌ ಷರೀಫ್‌ ಅವರೊಂದಿಗೆ ಮಾತುಕತೆ ನಡೆಸುವ ಕಾರ್ಯಕ್ರಮವೂ ಇದೆ. 

 

See also:

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು