ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ | ಬುಧವಾರ 24–7–1996

Last Updated 23 ಜುಲೈ 2021, 19:30 IST
ಅಕ್ಷರ ಗಾತ್ರ

ಮಲಪ್ರಭಾ ಜಲಾಶಯಕ್ಕೆ ಮಹದಾಯಿ ನದಿ ನೀರು

ಬೆಂಗಳೂರು, ಜುಲೈ 23– ಸುಮಾರು 2.18 ಲಕ್ಷ ಹೆಕ್ಟೇರ್ ಭೂಮಿಗೆ ನಿರಂತರ ಕಲ್ಪಿಸುವ ಉದ್ದೇಶದಿಂದ ಮಲ‍ಪ್ರಭಾ ಜಲಾಶಯಕ್ಕೆ ಮಹಾದಾಯಿ ನದಿಯಿಂದ ನೀರನ್ನು ಪಡೆಯುವ ಸಮಾರು 200 ಕೋಟಿ ರೂ. ವೆಚ್ಚದ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ.

ಈ ವಿಚಾರದಲ್ಲಿ ಕರ್ನಾಟಕ ಮತ್ತು ಗೋವಾ ಮುಖ್ಯಮಂತ್ರಿಗಳ ನಡುವೆ ಈ ತಿಂಗಳ ಅಂತ್ಯದೊಳಗಾಗಿ ಚರ್ಚೆ ನಡೆಯಲಿದೆ‘ ಎಂದು ಭಾರೀ ನೀರಾವರಿ ಖಾತೆ ಸಚಿವ ಕೆ.ಎನ್. ನಾಗೇಗೌಡ ವಿಧಾನಸಭೆಯಲ್ಲಿ ಇಂದು ಪ್ರಕಟಿಸಿದರು.

‘ಮಲಪ್ರಭಾ ಜಲಾಶಯ 1972ರಷ್ಟು ಹಿಂದೆಯೇ ಪೂರ್ಣಗೊಂಡಿದ್ದರೂ ಈ 24 ವರ್ಷಗಳಲ್ಲಿ ಅದು ಐದು ಬಾರಿ ಮಾತ್ರ ಭರ್ತಿಯಾಗಿದೆ. ಇದಕ್ಕೆ ಮಹದಾಯಿ ನದಿಯಿಂದ ನೀರನ್ನು ತಿರುಗಿಸದೇ ಇದ್ದಲ್ಲಿ ಈ ಜಲಾಶಯದ ಅಚ್ಚುಕಟ್ಟಿನ 2.18 ಲಕ್ಷ ಹೆಕ್ಟೇರಿಗೂ ಅಧಿಕ ಪ್ರದೇಶಕ್ಕೆ ನೀರನ್ನು ಪೂರೈಕೆ ಮಾಡುವುದು ಸಾಧ್ಯವೇ ಇಲ್ಲ‘ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT