ಮಂಗಳವಾರ, ಮೇ 24, 2022
27 °C

25 ವರ್ಷಗಳ ಹಿಂದೆ: ಬುಧವಾರ, ನವೆಂಬರ್‌ 13, 1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಯಾಣ ಬಳಿ ವಿಮಾನಗಳ ಡಿಕ್ಕಿ: 351 ಸಾವು

ನವದೆಹಲಿ, ನ. 12 (ಯುಎನ್‌ಐ, ಪಿಟಿಐ)– ಹರಿಯಾಣದ ರೋಟಕ್ ಜಿಲ್ಲೆಯ ಜಾಜಾರ್ ಮೇಲೆ ಹಾರಾಡುವಾಗಲೇ ಇಂಟರ್‌
ನ್ಯಾಷನಲ್ ಏರ್‌ವೇಸ್‌ಗೆ ಸೇರಿದ ಎರಡು ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದುದ ರಿಂದ ಕನಿಷ್ಠ 351 ಮಂದಿ ಸತ್ತ ಘೋರ ಘಟನೆ ಇಂದು ಸಂಜೆ ಸಂಭವಿಸಿದೆ. ಸತ್ತವರಲ್ಲಿ 200ಕ್ಕೂ ಹೆಚ್ಚು ಮಂದಿ ಭಾರತೀಯರು.

ಸೌಂದರ್ಯ ಸ್ಪರ್ಧೆಗೆ ಬೆಳಕಿನ ಹಬ್ಬದ ಮೆರುಗು

ಬೆಂಗಳೂರು, ನ.12– ವಿಶ್ವಸುಂದರಿ ಸ್ಪರ್ಧೆ ಯಲ್ಲಿ ಭಾಗವಹಿಸಲು ಆಗಮಿಸಿರುವ ವಿವಿಧ ದೇಶಗಳ ಸುಂದರಿಯರು ಬಲಿಪಾಡ್ಯಮಿಯ ದಿನವಾದ ಇಂದು ನಗರದಲ್ಲಿ ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಇದರೊಂದಿಗೆ ಭಾರತದಲ್ಲಿ ಇದೇ ಪ್ರಥಮ ಬಾರಿಗೆ ನಡೆಯುತ್ತಿರುವ ವಿಶ್ವಸುಂದರಿ ಸ್ಪರ್ಧೆ ವಿದ್ಯುಕ್ತವಾಗಿ ಆರಂಭವಾಯಿತು.

ಸುಂದರಿಯರ ಗೌರವಾರ್ಥ ಸ್ಪರ್ಧೆಯನ್ನು ಸಂಘಟಿಸಿರುವ ಎಬಿಸಿಎಲ್ ಸಂಸ್ಥೆ ವಿಮಾನ ಪಡೆಯ ತರಬೇತಿ ಕೇಂದ್ರದ ಪರೇಡ್ ಮೈದಾನದಲ್ಲಿ ದೀಪಾವಳಿ ಆಚರಣೆಗಾಗಿ ವರ್ಣರಂಜಿತ ಸಮಾರಂಭ ಏರ್ಪಡಿಸಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು