ಸೋನಿಯಾಗೆ ಆಹ್ವಾನ: ಕೆಪಿಸಿಸಿ ಸ್ವಾಗತ

ಬೆಂಗಳೂರು, ನ. 15– ಕಾಂಗ್ರೆಸ್ ಪಕ್ಷದ ಮುಖ್ಯ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಸೋನಿಯಾ ಗಾಂಧಿ ಅವರನ್ನು ಕೋರಿರುವ ಪಕ್ಷದ ಹೈಕಮಾಂಡ್ ನಿಲುವನ್ನು ಸ್ವಾಗತಿಸುವ ನಿರ್ಣಯವನ್ನು ನೂತನ ಅಧ್ಯಕ್ಷ ಧರ್ಮಸಿಂಗ್ ನೇತೃತ್ವದ ಪ್ರದೇಶ ಕಾಂಗ್ರೆಸ್ ಸಮಿತಿ ಅಂಗೀಕರಿಸಿದೆ.

ಸೋನಿಯಾ ಈ ಹೊಣೆ ವಹಿಸಿಕೊಳ್ಳುವು ದರಿಂದ ದೇಶದಾದ್ಯಂತ ಕಾರ್ಯಕರ್ತರಲ್ಲಿ ನವ ಚೈತನ್ಯ ತುಂಬಲಿದೆ, ಪಕ್ಷಕ್ಕೆ ಹಳೆಯ ವರ್ಚಸ್ಸು ಮರಳಲಿದೆ ಎಂದು ಅದು ಹೇಳಿದೆ.

ವಿಶ್ವಸುಂದರಿ ಸ್ಪರ್ಧೆಗೆ ವ್ಯಾಪಕ ಜನಬೆಂಬಲ

ಬೆಂಗಳೂರು, ನ. 15– ವಿಶ್ವಸುಂದರಿ ಸ್ಪರ್ಧೆ ನಗರದಲ್ಲಿ ನಡೆಯುತ್ತಿರುವುದು ಬೆಂಗಳೂರಿನ ಶೇ 75.7ರಷ್ಟು ಜನರಿಗೆ ಹೆಮ್ಮೆಯ ವಿಷಯವಾಗಿದೆ.

ಸೌಂದರ್ಯ ಸ್ಪರ್ಧೆಯನ್ನು ವಿರೋಧಿಸುತ್ತಿರುವ ಗುಂಪುಗಳು ಕರೆ ನೀಡಿರುವಂತೆ ಬಲವಂತವಾಗಿ ಸ್ಪರ್ಧೆಯನ್ನು ತಡೆಗಟ್ಟುವುದಕ್ಕೆ ಶೇ 78.8ರಷ್ಟು ಜನರು ತಮ್ಮ ತೀವ್ರ ವಿರೋಧ ದಾಖಲು ಮಾಡಿದ್ದರೆ, ಸ್ಪರ್ಧಿಗಳು ಈಜುಡುಗೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಮಹಿಳೆಯರ ಘನತೆಗೆ ಕುಂದುಂಟಾಗುವುದಿಲ್ಲ ಎಂಬ ಅಭಿಪ್ರಾಯವನ್ನು ಶೇ 56.7ರಷ್ಟು ಜನರು ವ್ಯಕ್ತಪಡಿಸಿದ್ದಾರೆ.

ಚೆನ್ನೈನ ‘ಆ್ಯಪ್ಟ್ ಸಂಶೋಧನಾ ಸಮೂಹ’ವು ‘ಪ್ರಜಾವಾಣಿ’ಗಾಗಿ ನಡೆಸಿದ ಸಮೀಕ್ಷೆಯಿಂದ ವ್ಯಕ್ತವಾಗಿರುವ ಪ್ರಮುಖ ಅಂಶಗಳು ಇವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.