25 ವರ್ಷಗಳ ಹಿಂದೆ: ನವೆಂಬರ್ 4, 1996

ಸಂಯುಕ್ತರಂಗ ಸರ್ಕಾರದ ಮೇಲೆ ಷರತ್ತು ಸಂಭವ
ನವದೆಹಲಿ, ನ. 3 (ಯುಎನ್‌ಐ, ಪಿಟಿಐ)– ಸಂಯುಕ್ತರಂಗ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಳ್ಳಬೇಕು ಎಂದು ವಿವಿಧ ಪ್ರದೇಶ ಕಾಂಗ್ರೆಸ್ ಸಮಿತಿಗಳು ಪಕ್ಷದ ವರಿಷ್ಠ ಮಂಡಲಿ ಮೇಲೆ ಒತ್ತಡ ಹೇರಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಾಳೆ ಇಲ್ಲಿ ಸಭೆ ಸೇರಲಿದೆ. ದೇವೇಗೌಡರ ಸರ್ಕಾರಕ್ಕೆ ಬೆಂಬಲ ಮುಂದುವರಿಸಲು ಷರತ್ತುಗಳನ್ನು ವಿಧಿಸುವ ಬಗ್ಗೆ ಚರ್ಚೆ ನಡೆಯುವ ಸಂಭವವಿದೆ. ಕಾಂಗ್ರೆಸ್ ಹಾಗೂ ಸಂಯುಕ್ತ ರಂಗ ಸರ್ಕಾರದ ನಡುವಿನ ಬಾಂಧವ್ಯ ಈಗ ಮಧುರವಾಗಿಲ್ಲ.
ಗದಗ: ಗಾಯಾಳು ಸಾವು, ಲಾಠಿ ಪ್ರಹಾರ
ಹುಬ್ಬಳ್ಳಿ, ನ. 3– ಗದಗ ಜಿಲ್ಲಾ ರಚನೆ ಚಳವಳಿ ಹಿನ್ನೆಲೆಯಲ್ಲಿ ತೀವ್ರ ದೊಂಬಿ, ಹಿಂಸಾಚಾರ, ಗೋಲಿಬಾರ್‌ಗಳಿಂದ ತತ್ತರಿಸಿದ್ದ ಗದಗ ನಗರದಲ್ಲಿ ಕಳೆದ ರಾತ್ರಿ ಇನ್ನೊಬ್ಬ ವ್ಯಕ್ತಿ ಆತ್ಮಾಹುತಿ ನಡೆಸಲು ಯತ್ನಿಸಿದ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಕಲ್ಲುತೂರಾಟ ನಡೆಸಿದ ಪ್ರಕ್ಷುಬ್ದ ಗುಂಪಿನ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಈ ಮಧ್ಯೆ ಗೋಲಿಬಾರ್‌ನಲ್ಲಿ ತೀವ್ರ ಗಾಯಗೊಂಡಿರುವ ಸ್ವಾತಂತ್ರ್ಯ ಯೋಧ ಹನುಮಂತಸಾ ಮೆಹರವಾಡೆ (80) ಅವರು ಇಂದು ಕೆಎಂಸಿ ಆಸ್ಪತ್ರೆಯಲ್ಲಿ ಮೃತರಾದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.